HomeLatest Newsʼದಾಸವಾಳʼ ಗಿಡಕ್ಕೆ ಹುಳು ಬಂದಿದ್ರೆ ನಿವಾರಿಸಲು ಈ ತಂತ್ರ ಬಳಸಿ

ʼದಾಸವಾಳʼ ಗಿಡಕ್ಕೆ ಹುಳು ಬಂದಿದ್ರೆ ನಿವಾರಿಸಲು ಈ ತಂತ್ರ ಬಳಸಿ

ದಾಸವಾಳ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಕಂಡುಬರುತ್ತದೆ. ದಾಸವಾಳ ತುಂಬಾ ಬೇಗನೆ ಬೆಳೆದು ಹೂಬಿಡುವಂತಹ ಸಸ್ಯವಾಗಿದೆ. ಆದರೆ ಇದನ್ನು ಸರಿಯಾಗಿ ನೋಡಿಕೊಳ್ಳಬೇಕು. ಇಲ್ಲವಾದರೆ ಅದಕ್ಕೆ ಬಿಳಿ ಹುಳುಗಳು ಹಿಡಿದು ಗಿಡ ಹಾಳಾಗುತ್ತದೆ. ಹಾಗಾಗಿ ಈ ಹುಳುಗಳನ್ನು ನಿವಾರಿಸಲು ಈ ತಂತ್ರ ಬಳಸಿ.

ದಾಸವಾಳದಲ್ಲಿ ಗಿಡದಲ್ಲಿ ಹಿಡಿದ ಬಿಳಿ ಹುಳುಗಳನ್ನು ನಿವಾರಿಸಲು ಬೇವಿನ ಎಣ್ಣೆ ಸಹಕಾರಿಯಾಗಿದೆ. ಅದಕ್ಕಾಗಿ 1 ಚಿಟಿಕೆ ಅಡುಗೆ ಸೋಡಾ, 1 ಚಮಚ ಶಾಂಪೂ ಮತ್ತು 2-3 ಹನಿ ಬೇವಿನೆಣ್ಣೆಯನ್ನು 1 ಲೋಟ ನೀರಿನಲ್ಲಿ ಬೆರೆಸಿ ಸಸ್ಯಗಳ ಮೇಲೆ ಸಿಂಪಡಿಸಿ. ಇದನ್ನು ದಿನಕ್ಕೆ 2 ಬಾರಿಯಾದರೂ ಮಾಡಿ. 3-4 ದಿನಗಳಲ್ಲಿ ಹುಳುಗಳು ನಾಶವಾಗುತ್ತವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದಾಸವಾಳ ಗಿಡದಲ್ಲಿರುವ ಬಿಳಿ ಹುಳುಗಳನ್ನು ತೆಗೆಯಲು ಸೋಪ್ ವಾಟರ್ ಬಳಸಿ. ಸ್ಪ್ರೇ ಬಾಟಲಿನಲ್ಲಿ ಕಾಲುಭಾಗ ನೀರನ್ನು ಹಾಕಿ ಅದಕ್ಕೆ 4 ಚಮಚ ಡಿಟರ್ಜೆಂಟ್ ಸೇರಿಸಿ. ಇದನ್ನು ಮಿಕ್ಸ್ ಮಾಡಿ ಸಸ್ಯಗಳಿಗೆ ಸಿಂಪಡಿಸಿ. ಇದನ್ನು 4-5 ಬಾರಿ ಬಳಸಿದ ಬಳಿಕ ಹುಳು ಸಾಯುತ್ತದೆ.

ಹಾಗೇ ದಾಸವಾಳ ಗಿಡದಲ್ಲಿ ಹಿಡಿದ ಹುಳುಗಳನ್ನು ತೆಗೆದುಹಾಕಲು ತುಂಬಾ ಸುಲಭವಾದ ಮಾರ್ಗವೆಂದರೆ ತುಂಬಾ ವೇಗವಾಗಿ ಒತ್ತಡದಿಂದ ನೀರನ್ನು ಹಾಕುವುದು. ಹೀಗೆ ಮಾಡುವುದರಿಂದ ಹುಳಗಳನ್ನು ಗಿಡದಿಂದ ಬೇರ್ಪಡಿಸಬಹುದು.

For Latest News Updates, Join Our Whatsapp Community🚩
RELATED ARTICLES

Most Popular