ಚಳಿಗಾಲದಲ್ಲಿ ತ್ವಚೆಯನ್ನು ಕಾಪಾಡಲು ಬಳಸಿ ನೈಸರ್ಗಿಕವಾದ ಈ ಮಾಯಿಶ್ಚರೈಸರ್

ಚಳಿಗಾಲದಲ್ಲಿ ಸಾಮಾನ್ಯವಾಗಿ ಶುಷ್ಕ ಗಾಳಿಯಿಂದಾಗಿ ಚರ್ಮ ಡ್ರೈ ಆಗುತ್ತದೆ. ಇದರಿಂದ ಚರ್ಮದಲ್ಲಿ ಬಿರುಕು ಮೂಡುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಚಳಿಗಾಲದಲ್ಲಿ ಮನೆಯಲ್ಲಿಯೇ ಈ ಮಾಯಿಶ್ಚರೈಸರ್ ಕ್ರೀಂ ತಯಾರಿಸಿ ಹಚ್ಚಿ.

2 ಚಮಚ ಅಲೋವೆರಾ ಜೆಲ್, 4 ಚಮಚ ಬಾದಾಮಿ ಎಣ್ಣೆ, 4 ಚಮಚ ವಿಟಮಿನ್ ಇ ಎಣ್ಣೆ, ಇವಿಷ್ಟನ್ನು ಸೇರಿಸಿ ಕ್ಕ್ರೀಂ ಆಗುವವರೆಗೂ ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ಸುವಾಸನೆ ಬೇಕೆಂದರೆ ಮಲ್ಲಿಗೆ ಎಣ್ಣೆಯನ್ನು ಬೆರೆಸಬಹುದು. ಇದನ್ನು ದಿನಕ್ಕೆ 2 ಬಾರಿ ಮುಖಕ್ಕೆ ಹಚ್ಚಿ.

½ ಚಮಚ ಶಿಯಾ ಬಟರ್, ½ ಕಪ್ ಹಾಲು, 2 ಚಮಚ ಬಾದಾಮಿ ಎಣ್ಣೆ ಇವಿಷ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ಸುವಾಸನೆ ಬೇಕಂದರೆ ಮಾತ್ರ ಎಸೆನ್ಷಿಯಲ್ ಆಯಿಲ್ ಬಳಸಿ. ಈ ಮಾಯಿಶ್ಚರೈಸರ್ ಅನ್ನು ದಿನಕ್ಕೆರಡು ಬಾರಿ ಬಳಸಿದರೆ ಮುಖ ಹೊಳಪಿನಿಂದ ಕೂಡಿರುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read