ಉಗುರಿನ ಶಿಲೀಂಧ್ರ ಸೋಂಕು ಬೇಗನೆ ನಿವಾರಿಸಲು ಬಳಸಿ ಈ ಮನೆಮದ್ದು

ಕೈ ಕಾಲಿನ ಉಗುರುಗಳು ಸೌಂದರ್ಯಕ್ಕೆ ಸಂಬಂಧಿಸಿವೆ. ಹಾಗಾಗಿ ಉಗುರುಗಳ ಆರೋಗ್ಯ ಕಾಪಾಡುವುದು ಅವಶ್ಯಕ. ಆದರೆ ದೇಹದಲ್ಲಿನ ಪೌಷ್ಟಿಕಾಂಶದ ಕೊರತೆಯಿಂದ ಉಗುರುಗಳಲ್ಲಿ ಸಮಸ್ಯೆ ಕಂಡುಬರುತ್ತದೆ. ಇದರಿಂದ ಉಗುರಿನಲ್ಲಿ ಶಿಲೀಂಧ್ರ ಸೋಂಕು, ಗಾಯ, ಉಗುರು ಒಡೆಯುವಿಕೆ ಸಮಸ್ಯೆ ಕಾಡುತ್ತದೆ. ಹಾಗಾಗಿ ಈ ಉಗುರಿನ ಶಿಲೀಂಧ್ರ ಸೋಂಕನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ.

ವಿನೆಗರ್ ಚರ್ಮದ ಮೇಲಿನ ಯಾವುದೇ ಶಿಲೀಂಧ್ರ ಸೋಂಕನ್ನು ನಿವಾರಿಸುತ್ತದೆ. ಹಾಗಾಗಿ 4ಕಪ್ ನೀರಿನಲ್ಲಿ 1 ಕಪ್ ವಿನೆಗರ್ ಮಿಕ್ಸ್ ಮಾಡಿ ಉಗುರುಗಳನ್ನು ಅದರಲ್ಲಿ ಅದ್ದಿ 20 ನಿಮಿಷಗಳ ಕಾಲ ಇಟ್ಟುಕೊಳ್ಳಿ.

ಅಡುಗೆ ಸೋಡಾವು ಎಕ್ಸ್ ಪೋಲಿಯೇಟಿಂಗ್ ಗುಣಗಳನ್ನು ಹೊಂದಿದೆ. ಇದು ಉಗುರುಗಳಲ್ಲಿ ಸೇರಿಕೊಂಡ ಕೊಳೆಗಳನ್ನು ನಿವಾರಿಸುತ್ತದೆ. ಹಾಗಾಗಿ ಅಡುಗೆ ಸೋಡಾಕ್ಕೆ ನಿಂಬೆ ರಸ ಮಿಕ್ಸ್ ಮಾಡಿ ಆ ಪೇಸ್ಟ್ ಅನ್ನು ಉಗುರುಗಳ ಮೇಲೆ ಹಚ್ಚಿ 10 ನಿಮಿಷಗಳ ಕಾಲ ಬಿಡಿ. ಬಳಿಕ ಸ್ವಚ್ಛಗೊಳಿಸಿ.

ತೆಂಗಿನೆಣ್ಣೆ  ಚರ್ಮ, ಕೂದಲಿನ ಆರೋಗ್ಯಕ್ಕೆ ಮಾತ್ರವಲ್ಲ ಇದರಿಂದ ಉಗುರುಗಳ ಆರೋಗ್ಯವನ್ನು ಕಾಪಾಡಬಹುದು. ಹಾಗಾಗಿ ತೆಂಗಿನೆಣ್ಣೆಗೆ ಅರಿಶಿನ ಮಿಕ್ಸ್ ಮಾಡಿ ಉಗುರುಗಳ ಮೇಲೆ ಹಚ್ಚಿ. ಇದರಿಂದ ನಂಜು ನಿವಾರಣೆಯಾಗುತ್ತದೆ.

ಅಲೋವೆರಾ ಆ್ಯಂಟಿ ಫಂಗಲ್ ಗುಣಗಳನ್ನು ಹೊಂದಿದೆ. ಇದು ಸೋಂಕುಗಳನ್ನು ನಿವಾರಿಸುತ್ತದೆ. ಹಾಗಾಗಿ ಅಲೋವೆರಾ ಜೆಲ್ ಅನ್ನು ದಿನದಲ್ಲಿ 2 ಬಾರಿ ಉಗುರುಗಳ ಮೇಲೆ ಹಚ್ಚಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read