ಮಣ್ಣಿನ ಫಲವತ್ತತೆ ಹೆಚ್ಚಾಗಲು ಹಾಲನ್ನು ಹೀಗೆ ಬಳಸಿ

ಹಾಲು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದರಲ್ಲಿ ಪ್ರೋಟೀನ್, ಕ್ಯಾಲ್ಸಿಯಂ ಅಧಿಕವಾಗಿರುತ್ತದೆ. ಇದು ಮೂಳೆಗಳನ್ನು ಬಲಪಡಿಸುತ್ತದೆ. ನಮಗೆ ಶಕ್ತಿ ನೀಡುತ್ತದೆ. ಒಟ್ಟಾರೆ ಇದು ಆರೋಗ್ಯಕ್ಕೆ ತುಂಬಾ ಉತ್ತಮವಾಗಿದೆ. ಅಲ್ಲದೇ ಈ ಹಾಲನ್ನು ಬಳಸಿ ಮಣ್ಣಿ ನ ಫಲವತ್ತತೆಯನ್ನು ಕೂಡ ಸುಧಾರಿಸಬಹುದು. ಅದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.

-ಹಾಲಿನಲ್ಲಿ ಕ್ಯಾಲ್ಸಿಯಂ ಇರುತ್ತದೆ. ಇದು ಮನುಷ್ಯರಿಗೆ ಮಾತ್ರವಲ್ಲ ಸಸ್ಯಗಳಿಗೂ ಸಹಕಾರಿಯಾಗಿದೆ. ಹಾಲಿನಲ್ಲಿರುವ ಸಕ್ಕರೆಯಂಶ ಆರೋಗ್ಯಕರ ಬೆಳೆಗಳ ಉತ್ಪಾದನೆಗೆ ಸಹಕಾರಿಯಾಗಿದೆ. ಹಾಗಾಗಿ ನೀವು ತೋಟದಲ್ಲಿ ಹಾಲನ್ನು ಗೊಬ್ಬರವಾಗಿ ಬಳಸಬಹುದು.

-ಹಾಲನ್ನು ಬಳಸಿ ಸಸ್ಯಗಳ ಮೇಲಿನ ಶಿಲೀಂಧ್ರದಿಂದಾಗುವ ಕೊಳೆತವನ್ನು ತಡೆಯಬಹುದು. ಹಾಗಾಗಿ ಹಾಲಿನಲ್ಲಿ ನೀರನ್ನು ಬೆರೆಸಿ ಸಸ್ಯಗಳ ಮೇಲೆ ಸಿಂಪಡಿಸಿ. ಮತ್ತು ಇದು ಕೀಟಗಳ ಹಾವಳಿಯನ್ನು ತಪ್ಪಿಸುತ್ತದೆ.

-ಸಸ್ಯಗಳು ಉತ್ತಮವಾಗಿ ಬೆಳೆಯಲು ಮಣ್ಣು ಸಹಕಾರಿಯಾಗಿದೆ. ಮಣ್ಣಿನಲ್ಲಿರುವ ಪೋಷಕಾಂಶಗಳನ್ನು ಹೀರಿ ಸಸ್ಯ ಬೆಳೆಯುತ್ತದೆ. ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲು ಹಾಲನ್ನು ಮಣ್ಣಿನಲ್ಲಿ ಬೆರೆಸಿ. ಇದನ್ನು ಗಿಡಕ್ಕೆ ಹಾಕಿದರೆ ಗಿಡ ಚೆನ್ನಾಗಿ ಬೆಳೆಯುತ್ತದೆ.

-ನೀವು ತೋಟದಲ್ಲಿ ಟೊಮೆಟೊ ಬೆಳೆ ಬೆಳೆಯುತ್ತಿದ್ದರೆ ಅದಕ್ಕೆ ಹಾಲನ್ನು ಬಳಸಬಹುದು. ಹಾಲಿನಲ್ಲಿ ನೀರನ್ನು ಬೆರೆಸಿ ಪ್ರತಿ ವಾರಕ್ಕೊಮ್ಮೆ ಟೊಮೆಟೊ ಮೇಲೆ ಸಿಂಪಡಿಸಿದರೆ ಇದು ಟೊಮೆಟೊವನ್ನು ರಕ್ಷಿಸುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read