HomeBeautyಮುಖ ತೊಳೆಯಲು ಸಾಬೂನಿನ ಬದಲು ಇದನ್ನು ಬಳಸಿ

ಮುಖ ತೊಳೆಯಲು ಸಾಬೂನಿನ ಬದಲು ಇದನ್ನು ಬಳಸಿ

ಧೂಳು ಹಾಗೂ ಹೊಗೆ ನಮ್ಮ ಆರೋಗ್ಯದ ಜೊತೆಗೆ ಸೌಂದರ್ಯವನ್ನು ಹಾಳು ಮಾಡ್ತಾ ಇದೆ. ಎಷ್ಟು ಮೇಕಪ್ ಮಾಡಿದ್ರೂ ಮುಖ ಕಳೆಗುಂದಿದಂತೆ ಕಾಣುತ್ತದೆ. ಚರ್ಮದ ಸೋಂಕುಗಳು ಕಾಣಿಸಿಕೊಳ್ಳುತ್ತವೆ.

ಪ್ರತಿದಿನ ಮೂರ್ನಾಲ್ಕು ಬಾರಿ ಸೋಪ್ ನಲ್ಲಿ ಮುಖ ತೊಳೆದ್ರೂ ಧೂಳು, ಜಿಡ್ಡು ಹೋಗಿಲ್ಲ ಎನ್ನುವವರು ಮನೆಯಲ್ಲಿಯೇ ಸಿಗುವ ಪದಾರ್ಥ ಬಳಸಿ ಮುಖದ ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು.

ಜೇನುತುಪ್ಪ, ನಿಂಬೆ ರಸ ಹಾಗೂ ಹಾಲಿನ ಕೆನೆಯನ್ನು ಬೆರೆಸಿ ಪೇಸ್ಟ್ ತಯಾರಿಸಿಕೊಳ್ಳಿ. ನಂತ್ರ ಅದನ್ನು ಮುಖಕ್ಕೆ ಹಚ್ಚಿ ಮಸಾಜ್ ಮಾಡಿ 10 ನಿಮಿಷದ ನಂತ್ರ ಮುಖವನ್ನು ತೊಳೆಯಿರಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸ್ವಲ್ಪ ಅರಿಶಿನ, ಶ್ರೀಗಂಧದ ಪುಡಿ ಹಾಗೂ ಹಾಲನ್ನು ಬೆರೆಸಿ ಅದನ್ನು ಮುಖಕ್ಕೆ ಹಚ್ಚಿಕೊಳ್ಳಿ. 2-3 ನಿಮಿಷ ಮಸಾಜ್ ಮಾಡಿ ಸ್ವಲ್ಪ ಸಮಯ ಬಿಟ್ಟು ತೊಳೆಯಿರಿ.

ಬೇಯಿಸಿದ ಒಂದು ಬಾಳೆಹಣ್ಣು ಹಾಗೂ ಹಾಲನ್ನು ಮಿಶ್ರಣ ಮಾಡಿ. ಇದನ್ನು ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟು ಮುಖ ತೊಳೆಯಿರಿ.

ಒಂದು ಚಮಚ ಗುಲಾಬಿ ರಸ ಹಾಗೂ ಒಂದು ಚಮಚ ನೀರನ್ನು ಬೆರೆಸಿ ರಾತ್ರಿ ಮಲಗುವಾಗ ಮುಖಕ್ಕೆ ಹಚ್ಚಿಕೊಳ್ಳಿ. ಬೆಳಿಗ್ಗೆ ಎದ್ದ ತಕ್ಷಣ ಮುಖವನ್ನು ತೊಳೆಯಿರಿ.

1 ಚಮಚ ಅಲೋವೆರಾ ಜೆಲ್ ಮುಖಕ್ಕೆ ಹಚ್ಚಿ 30 ನಿಮಿಷ ಬಿಟ್ಟು ಮುಖ ತೊಳೆಯಿರಿ.

For Latest News Updates, Join Our Whatsapp Community🚩
RELATED ARTICLES

Most Popular