HomeLatest Newsಚರ್ಮದ ಹೊಳಪು ಹೆಚ್ಚಿಸಲು ಬಳಸಿ ನೆಲ್ಲಿಕಾಯಿ ಫೇಸ್ ಪ್ಯಾಕ್

ಚರ್ಮದ ಹೊಳಪು ಹೆಚ್ಚಿಸಲು ಬಳಸಿ ನೆಲ್ಲಿಕಾಯಿ ಫೇಸ್ ಪ್ಯಾಕ್

ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಮತ್ತು ಬಿ ಅಂಶವಿದೆ. ಇದು ಕೂದಲಿಗೆ ತುಂಬಾ ಒಳ್ಳೆಯದು, ಮಾತ್ರವಲ್ಲ ಇದರಿಂದ ಚರ್ಮದ ಆರೋಗ್ಯವನ್ನು ಕೂಡ ಕಾಪಾಡಿಕೊಳ್ಳಬಹುದು. ಇದು ಚರ್ಮವನ್ನು ದೀರ್ಘಕಾಲದವರೆಗೆ ಯೌವನವಾಗಿರಲು ಸಹಾಯ ಮಾಡುತ್ತದೆ. ಹಾಗಾಗಿ ನೆಲ್ಲಿಕಾಯಿ ಫೇಸ್ ಪ್ಯಾಕ್ ತಯಾರಿಸಿ ಹಚ್ಚಿ.

*2 ನೆಲ್ಲಿಕಾಯಿ ತುರಿದು ರಸ ತೆಗೆಯಿರಿ. ಬಳಿಕ 1 ಕಪ್ ಪಪ್ಪಾಯಿ ಬೇಯಿಸಿ ಪೇಸ್ಟ್ ತಯಾರಿಸಿ ಎರಡನ್ನು ಮಿಕ್ಸ್ ಮಾಡಿ. ಇದನ್ನು ಹತ್ತಿಯ ಸಹಾಯದಿಂದ ಮುಖ ಮತ್ತು ಕುತ್ತಿಗೆಗೆ ಹಚ್ಚಿ. 15 ನಿಮಿಷ ಬಿಟ್ಟು ತಣ್ಣೀರಿನಲ್ಲಿ ವಾಶ್ ಮಾಡಿ. ಇದರಿಂದ ಚರ್ಮ ಹೊಳೆಯುತ್ತದೆ.

*2 ಚಮಚ ಆಮ್ಲಾ ಪೇಸ್ಟ್, 1 ಚಮಚ ಮೊಸರು, 1 ಚಮಚ ಜೇನುತುಪ್ಪ ಎಲ್ಲವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು 5 ನಿಮಿಷ ಬಿಟ್ಟು ಮುಖಕ್ಕೆ ಹಚ್ಚಿ. 20 ನಿಮಿಷ ಬಿಟ್ಟು ತಣ್ಣೀರಿನಿಂದ ವಾಶ್ ಮಾಡಿ. ಇದನ್ನು ವಾರದಲ್ಲಿ ಒಮ್ಮೆ ಬಳಸಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular