
ಒಂದು ಸೌತೆಕಾಯಿಯನ್ನು ತೆಗೆದುಕೊಂಡು ಅದನ್ನು ಸ್ವಚ್ಛಗೊಳಿಸಿ ಸಿಪ್ಪೆ ತೆಗೆದು ತುರಿದು ರಸ ತೆಗೆಯಿರಿ. ಅದಕ್ಕೆ 2 ಚಮಚ ಅಲೋವೆರಾ ಜೆಲ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಗಾಜಿನ ಬಾಟಲಿನಲ್ಲಿ ಸ್ಟೋರ್ ಮಾಡಿ ಇಡಿ. ಇದನ್ನು ರಾತ್ರಿಯ ವೇಳೆ ಮುಖಕ್ಕೆ ಹಚ್ಚಿ ಮಲಗಿ. ಬೆಳಿಗ್ಗೆ ಮುಖವನ್ನು ಸ್ವಚ್ಚಗೊಳಿಸಿ .
ಇದು ಮುಖಕ್ಕೆ ವಿಶಿಷ್ಟವಾದ ಹೊಳಪನ್ನು ನೀಡುತ್ತದೆ. ವಯಸ್ಸಾದಂತೆ ಕಾಡುವ ಚರ್ಮದ ಸಮಸ್ಯೆಗಳನ್ನು ನಿವಾರಿಸುತ್ತದೆ. ಚರ್ಮದ ಶುಷ್ಕತೆಯನ್ನು ದೂರ ಮಾಡುತ್ತದೆ. ಸನ್ ಟ್ಯಾನ್ ಗಳನ್ನು ತೆಗೆದು ಹಾಕಿ ತ್ವಚೆಗೆ ರಕ್ಷಣೆ ನೀಡುತ್ತದೆ.

