HomeInternationalಪುಟ್ಟ ಮಗಳ ಮ್ಯಾಕ್‌ ಡೊನಾಲ್ಡ್ಸ್ ಮೀಲ್ ಬಾಕ್ಸ್‌ನಲ್ಲಿ ಬಾಕ್ಸ್‌ ಕಟರ್‌ ಕಂಡು ದಂಗಾದ ತಾಯಿ...!

ಪುಟ್ಟ ಮಗಳ ಮ್ಯಾಕ್‌ ಡೊನಾಲ್ಡ್ಸ್ ಮೀಲ್ ಬಾಕ್ಸ್‌ನಲ್ಲಿ ಬಾಕ್ಸ್‌ ಕಟರ್‌ ಕಂಡು ದಂಗಾದ ತಾಯಿ…!

ಮಗಳಿಗೆಂದು ಮ್ಯಾಕ್‌ಡೊನಾಲ್ಡ್ಸ್‌ನಿಂದ ಆರ್ಡರ್‌ ಮಾಡಿದ್ದ ಮೀಲ್ ಬಾಕ್ಸ್‌ನಲ್ಲಿ ಬಾಕ್ಸ್ ಕಟ್ಟರ್‌ ಒಂದನ್ನು ಕಂಡು ಚಕಿತರಾದ ಮಹಿಳೆಯೊಬ್ಬರು ಈ ವಿಚಾರವನ್ನು ಫೇಸ್ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.

ಡಾನ್ ಪರೆಟ್ ಹೆಸರಿನ ಈ ಮಹಿಳೆ ತನ್ನ ಮಗಳ ’ಹ್ಯಾಪಿ ಮೀಲ್’ ಬಾಕ್ಸ್‌ನ ಎರಡು ಚಿತ್ರಗಳನ್ನು ಶೇರ್‌ ಮಾಡಿದ್ದು, “ನೀವು ಇಂಥ ವಿಚಾರಗಳ ಬಗ್ಗೆ ಕೇಳಿರಬಹುದು. ಆದರೆ ನನಗೆ ಈ ಅನುಭವ ಆಗಬಹುದು ಎಂದು ಊಹಿಸಿರಲಿಲ್ಲ. ಒಂದು ವೇಳೆ ನನ್ನ ಮಗಳು ಹಾಗೂ ಆಕೆ ಈ ಆಹಾರವನ್ನು ಹಂಚಿಕೊಂಡು ತನ್ನಲಿದ್ದ ಮಕ್ಕಳಿಗೆ ಈ ಬಾಕ್ಸ್‌ ಕಟರ್‌ ಸಿಕ್ಕಿ, ಅವರೆಲ್ಲಾ ಅದನ್ನು ಆಟಿಕೆ ಎಂದುಕೊಂಡು ಆಟವಾಡಲು ಹೋಗಿದ್ದರೆ ಏನು ಕಥೆ,” ಎಂದು ಕಳಕಳಿ ವ್ಯಕ್ತಪಡಿಸಿ ಡಾನ್ ಬರೆದುಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅದು ಹೇಗೆ ಈ ಬಾಕ್ಸ್ ಕಟರ್‌ ತಮ್ಮ ಮಗಳ ಹ್ಯಾಪಿ ಮೀಲ್ ಬಾಕ್ಸಿನಲ್ಲಿ ಬಂತು ಎಂದು ಮ್ಯಾ‌ಕ್‌ ಡೊನಾಲ್ಡ್ಸ್‌ಅನ್ನು ಟ್ಯಾಗ್ ಮಾಡಿ ಕೇಳಿದ್ದಾರೆ ಡಾನ್.

ಈ ಕುರಿತು ಪ್ರತಿಕ್ರಿಯಿಸಿದ ಮ್ಯಾಕ್‌ ಡೊನಾಲ್ಡ್ಸ್ ವಕ್ತಾರ, “ಈ ಘಟನೆಗೆ ಸಂಬಂಧಪಟ್ಟ ಗ್ರಾಹಕರೊಂದಿಗೆ ಸಂಪರ್ಕದಲ್ಲಿದ್ದು, ತನಿಖೆ ಮುಂದುವರೆಸಿದ್ದೇವೆ,” ಎಂದಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular