ವಿಮಾನದ ಶೌಚಾಲಯದಲ್ಲಿ ಕ್ಯಾಮೆರಾ ಅಳವಡಿಸಿ ಹುಡುಗಿಯರ ವಿಡಿಯೋ ಸೆರೆಹಿಡಿಯುತ್ತಿದ್ದ ಆಘಾತಕಾರಿ ಘಟನೆ ಅಮೆರಿಕನ್ ಏರ್‌ಲೈನ್ಸ್ ನಲ್ಲಿ ನಡೆದಿದೆ. ಫ್ಲೈಟ್ ಅಟೆಂಡೆಂಟ್ ಇಂತಹ ಕೃತ್ಯವೆಸಗಿದ್ದು ವರ್ಜೀನಿಯಾದಲ್ಲಿ ಫೆಡರಲ್ ಏಜೆಂಟ್‌ಗಳು ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿಯನ್ನು 36 ವರ್ಷದ ಎಸ್ಟೆಸ್ ಕಾರ್ಟರ್ ಥಾಂಪ್ಸನ್ III ಎಂದು ಗುರುತಿಸಲಾಗಿದೆ. ಮಕ್ಕಳ ಲೈಂಗಿಕ ಶೋಷಣೆ ಮತ್ತು ಮಕ್ಕಳ ಅಶ್ಲೀಲ ಚಿತ್ರಗಳ ಸೆರೆಹಿಡಿದಿರುವ ಆರೋಪವನ್ನು ಹೊರಿಸಲಾಗಿದೆ. ಈ ಘಟನೆಯು ಸೆಪ್ಟೆಂಬರ್ 2023 ರಲ್ಲಿ ನಡೆದಿದ್ದು 14 ವರ್ಷದ ಹುಡುಗಿಯ ವಿಡಿಯೋವನ್ನ ಆರೋಪಿ ಥಾಂಪ್ಸನ್ ಬಾತ್ ರೂಂನಲ್ಲಿ ರೆಕಾರ್ಡ್ ಮಾಡಲು ಪ್ರಯತ್ನಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ.
ರೊಲಿನಾದ ಚಾರ್ಲೊಟ್‌ನಿಂದ ಬೋಸ್ಟನ್‌ಗೆ ವಿಮಾನ ಹಾರಾಟದ ಸಮಯದಲ್ಲಿ ಥಾಂಪ್ಸನ್ ಹುಡುಗಿಯನ್ನು ಸಂಪರ್ಕಿಸಿದ್ದ. ಬಾಲಕಿ ಶೌಚಾಲಯದ ಹೊರಗೆ ಕಾಯುತ್ತಿರುವುದನ್ನು ನೋಡಿ ಅವಳನ್ನು ಪ್ರಥಮ ದರ್ಜೆಯ ಶೌಚಾಲಯ ಬಳಸುವಂತೆ ಅವಕಾಶ ಮಾಡಿಕೊಟ್ಟು ಅವಳನ್ನು ಅಲ್ಲಿಗೆ ಕರೆದೊಯ್ದನು. ಮೊದಲು ಅವನು ತನ್ನ ಕೈ ತೊಳೆಯಬೇಕು ಎಂದು ಹೇಳಿ ಶೌಚಾಲಯದ ಒಳಗೆ ಹೋಗಿದ್ದ. ಹೊರಗೆ ಬಂದಾಗ ಶೌಚಾಲಯ ಒಡೆದು ಹೋಗಿದೆ ಎಂದು ಹೇಳಿದ್ದ. ಆದರೆ ಟಾಯ್ಲೆಟ್ ಸೀಟಿನ ಮುಚ್ಚಳದ ಕೆಳಗೆ ಸೀಟ್ ಮುರಿದಿದೆ ಎಂದು ಅಂಟಿಸಿದ್ದ ಸ್ಟಿಕ್ಕರ್‌ಗಳನ್ನು ಬಾಲಕಿ ಗಮನಿಸಿದಳು.
ಆಕೆ ಟಾಯ್ಲೆಟ್ ಅನ್ನು ಫ್ಲಶ್ ಮಾಡಲು ಪ್ರಯತ್ನಿಸಿದಾಗ, ಸ್ಟಿಕ್ಕರ್‌ಗಳ ಹಿಂದೆ ಮರೆಮಾಡಿದ ಐಫೋನ್ ಅನ್ನು ಕಂಡುಹಿಡಿದಳು. ಅದರ ಚಿತ್ರ ತೆಗೆದು ಪೋಷಕರಿಗೆ ತೋರಿಸಿದ್ದಳು.
ಆಕೆಯ ಪೋಷಕರು ಥಾಂಪ್ಸನ್ ನ ಫೋನ್ ತೋರಿಸುವಂತೆ ಕೇಳಿದಾಗ ಆತ ಶೌಚಾಲಯದಲ್ಲಿ ತನ್ನನ್ನು ತಾನೇ ಲಾಕ್ ಮಾಡಿಕೊಂಡು ವಿಮಾನ ಇಳಿಯುವವರೆಗೂ ಅಲ್ಲಿಯೇ ಇದ್ದ.
ಬಳಿಕ ಪೊಲೀಸರು ಥಾಂಪ್ಸನ್ ಫೋನ್ ಅನ್ನು ಪರಿಶೀಲಿಸಿದಾಗ ಹೆಚ್ಚೇನೂ ಸಿಗಲಿಲ್ಲ. ಆದರೆ ಆತನ ಐಕ್ಲೌಡ್‌ನಲ್ಲಿ ಕೆಲವು ವೀಡಿಯೊ ಕ್ಲಿಪ್‌ಗಳಿದ್ದವು. ಕನಿಷ್ಠ ನಾಲ್ಕು ಬಾರಿ ಶೌಚಾಲಯದಲ್ಲಿ ಯುವತಿಯರ ವಿಡಿಯೋ ರೆಕಾರ್ಡ್ ಮಾಡಿದ್ದು ಪೊಲೀಸರ ಕಣ್ಣಿಗೆ ಬಿತ್ತು.
ಆತ ವಿಡಿಯೋ ರೆಕಾರ್ಡ್ ಮಾಡಿದ ಹುಡುಗಿಯರು 7 ರಿಂದ 14 ವರ್ಷ ವಯಸ್ಸಿನವರಾಗಿದ್ದರು. ಥಾಂಪ್ಸನ್‌ನ ಸೂಟ್‌ಕೇಸ್‌ನಲ್ಲಿ ಹುಡುಗಿ ನೋಡಿದಂತಹ ಸ್ಟಿಕ್ಕರ್‌ಗಳನ್ನು ಸಹ ಪೊಲೀಸರು ಕಂಡುಕೊಂಡರು. ಅಮೆರಿಕನ್ ಏರ್ ಲೈನ್ಸ್ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು ತನಿಖೆಗೆ ಸಹಾಯ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.
https://twitter.com/sirajnoorani/status/1786302410983616724?ref_src=twsrc%5Etfw%7Ctwcamp%5Etweetembed%7Ctwterm%5E1786302410983616724%7Ctwgr%5E1a157f6267817c06f43c251f5a400086c6b0bdf3%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fthefreepressjournal-epaper-dhecf5ddffe11b4f36b496f4bee6e60122%2Fuspervertflightattendantrecordsteenagegirlsusingbathroomonplanebyfixingiphoneontoiletseatshockingvisualssurface-newsid-n605522776