HomeIndiaBREAKING: ಮುಂಬೈ ಯುಎಸ್ ಕಾನ್ಸುಲೇಟ್ ಕಚೇರಿಗೆ ಬೆದರಿಕೆ: ಎಫ್‌ಐಆರ್ ದಾಖಲಿಸಿ ತನಿಖೆ

BREAKING: ಮುಂಬೈ ಯುಎಸ್ ಕಾನ್ಸುಲೇಟ್ ಕಚೇರಿಗೆ ಬೆದರಿಕೆ: ಎಫ್‌ಐಆರ್ ದಾಖಲಿಸಿ ತನಿಖೆ

ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ ನಲ್ಲಿರುವ(ಬಿಕೆಸಿ) ಯುಎಸ್ ಕಾನ್ಸುಲೇಟ್‌ಗೆ ಶನಿವಾರ ತಡರಾತ್ರಿ ಬೆದರಿಕೆಯ ಮೇಲ್ ಬಂದಿದ್ದು, ಪ್ರಕರಣ ದಾಖಲಾಗಿದೆ

ಯುಎಸ್ ಕಾನ್ಸುಲೇಟ್ ಜನರಲ್ ಕಚೇರಿಗೆ ಬೆದರಿಕೆಯ ಮೇಲ್ ಬಂದಿದ್ದು, ಮುಂಬೈ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಮುಂಬೈ ಪೊಲೀಸರ ಪ್ರಕಾರ, ಶನಿವಾರ ಮುಂಜಾನೆ 3.50 ರ ಸುಮಾರಿಗೆ [email protected] ವಿಳಾಸದಿಂದ ಇಮೇಲ್ ಸ್ವೀಕರಿಸಲಾಗಿದೆ. ಮೇಲ್‌ನಲ್ಲಿ, ವ್ಯಕ್ತಿಯು ತಾನು ಪರಾರಿಯಾಗಿರುವ ಯುಎಸ್ ಪ್ರಜೆ ಎಂದು ಹೇಳಿಕೊಂಡಿದ್ದಾನೆ. ಎಲ್ಲಾ ಯುಎಸ್ ಕಾನ್ಸುಲೇಟ್‌ಗಳನ್ನು ಸ್ಫೋಟಿಸುವುದಾಗಿ. ಅಲ್ಲಿ ಕೆಲಸ ಮಾಡುವ ಅಮೆರಿಕನ್ ನಾಗರಿಕರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

BKC ಪೊಲೀಸ್ ಠಾಣೆಯು ಅಪರಿಚಿತ ವ್ಯಕ್ತಿಗಳ ಅಡಿಯಲ್ಲಿ ಭಾರತೀಯ ದಂಡ ಸಂಹಿತೆಯ (IPC) 505(1)(b) ಮತ್ತು 506(2) ಸೆಕ್ಷನ್‌ಗಳ ಅಡಿಯಲ್ಲಿ FIR ದಾಖಲಿಸಿ ಹೆಚ್ಚಿನ ತನಿಖೆ ಕೈಗೊಂಡಿದೆ.

ಒಂದು ತಿಂಗಳೊಳಗೆ ನಗರಕ್ಕೆ ಬಂದ ಎರಡನೇ ಬೆದರಿಕೆ ಇದಾಗಿದೆ. ಇದಕ್ಕೂ ಮುನ್ನ ಮುಂಬೈ ಟ್ರಾಫಿಕ್ ಪೊಲೀಸ್ ಕಂಟ್ರೋಲ್ ರೂಮ್‌ಗೆ ಫೆಬ್ರವರಿ 2 ರಂದು ನಗರದಾದ್ಯಂತ ಸರಣಿ ಬಾಂಬ್ ಸ್ಫೋಟಗಳ ಬೆದರಿಕೆ ಸಂದೇಶ ಬಂದಿತ್ತು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular