ಮಿಚಿಗನ್: ಅಮೆರಿಕದ ಮಿಚಿಗನ್‌ನ ಟ್ರಾವರ್ಸ್ ಸಿಟಿಯಲ್ಲಿರುವ ವಾಲ್‌ಮಾರ್ಟ್‌ನಲ್ಲಿ ಶನಿವಾರ ನಡೆದ ಆಘಾತಕಾರಿ ಘಟನೆಯಲ್ಲಿ ಕನಿಷ್ಠ 11 ಜನ ಇರಿತಕ್ಕೊಳಗಾಗಿದ್ದಾರೆ.
ಸ್ಥಳೀಯ ಅಧಿಕಾರಿಗಳ ಪ್ರಕಾರ, ಆರು ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ. ಗ್ರ್ಯಾಂಡ್ ಟ್ರಾವರ್ಸ್ ಕೌಂಟಿ ಶೆರಿಫ್ ಈ ದಾಳಿಯನ್ನು ಹಿಂಸಾಚಾರ ಎಂದು ಬಣ್ಣಿಸಿದ್ದಾರೆ. ಒಬ್ಬ ಶಂಕಿತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಮತ್ತು ತನಿಖೆ ಪ್ರಸ್ತುತ ನಡೆಯುತ್ತಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗಳಿಗೆ ಸಾಗಿಸಲಾಯಿತು ಎಂದು ತಿಳಿಸಿದ್ದಾರೆ.
11ಕ್ಕೂ ಹೆಚ್ಚು ಮಂದಿ ಸಾಮೂಹಿಕ ಇರಿತಕ್ಕೆ ಒಳಗಾಗಿದ್ದಾರೆ ಎಂದು ಗ್ರ್ಯಾಂಡ್ ಟ್ರಾವರ್ಸ್ ಕೌಂಟಿ ಶೆರಿಫ್ ಮೈಕೆಲ್ ಶಿಯಾ ಹೇಳಿದ್ದಾರೆ.
ಉತ್ತರ ಮಿಚಿಗನ್‌ನ ಪ್ರದೇಶದ ಅತಿದೊಡ್ಡ ಆಸ್ಪತ್ರೆಯಲ್ಲಿ 11 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮುನ್ಸನ್ ಹೆಲ್ತ್‌ಕೇರ್ ವಕ್ತಾರ ಮೇಗನ್ ಬ್ರೌನ್ ತಿಳಿಸಿದ್ದು, ಎಲ್ಲರೂ ಇರಿತಕ್ಕೊಳಗಾಗಿದ್ದಾರೆ. ಆರು ಮಂದಿ ಗಂಭೀರ ಸ್ಥಿತಿಯಲ್ಲಿದ್ದಾರೆ.
ಚಾಕುವಿನೊಂದಿಗೆ ದಾಳಿ ಮಾಡಿದ ಶಂಕಿತನನ್ನು ಮಿಚಿಗನ್ ರಾಜ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.
Grand Traverse County Sheriff’s Office is investigating a multiple stabbing incident at the Wal-Mart in Traverse City. The suspect is in custody, details are limited at this time.
— MSP Sixth District (@mspwestmi) July 26, 2025
A PIO is in route to the scene and details will be posted @mspnorthernmi and @MSPWestmi as they… pic.twitter.com/5MC2M2YZi4
🇺🇸 At least 11 people were injured in a stabbing at a Walmart store in the US state of Michigan.
— Маrina Wolf (@volkova_ma57183) July 27, 2025
This was reported by NBC, citing officials.
According to the state police, the suspect in the attack is in custody. The victims are already receiving assistance. pic.twitter.com/KtCjDOme2A