HomeEntertainment190 ಕೋಟಿ ರೂ ಬಂಗಲೆ ಖರೀದಿಸಿದ್ದಾರಾ ಊರ್ವಶಿ?

190 ಕೋಟಿ ರೂ ಬಂಗಲೆ ಖರೀದಿಸಿದ್ದಾರಾ ಊರ್ವಶಿ?

ಬಾಲಿವುಡ್ ನಟಿ ಊರ್ವಶಿ ರೌತೇಲಾ 190 ಕೋಟಿ ರೂ ಮೌಲ್ಯದ ಹೊಸ ಬಂಗಲೆಯೊಂದನ್ನು ಖರೀದಿಸಿದ್ದಾರೆ ಎಂದು ನಟಿಗೆ ಹತ್ತಿರದ ಮೂಲಗಳು ಕೆಲ ದಿನಗಳ ಹಿಂದೆ ತಿಳಿಸಿದ್ದವು. ರೌತೇಲಾರ ಹೊಸ ಮನೆ ಯಶ್ ರಾಜ್ ಚೋಪ್ರಾ ಮನೆ ಬಳಿಯೇ ಇದೆ ಎಂದೂ ಸಹ ಹೇಳಲಾಗಿತ್ತು.

ಆದರೆ ಈ ಸುದ್ದಿ ಸುಳ್ಳೆಂದು ರೌತೇಲಾ ತಾಯಿ ಮೀರಾ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಾಲ್ಕು ಅಂತಸ್ತುಗಳಿರುವ ಈ ಹೊಸ ಬಂಗಲೆಗೆ ರೌತೇಲಾ ಸ್ಥಳಾಂತರಗೊಂಡಿದ್ದಾರೆ ಎಂದು ತಿಳಿಸಿದ ಸುದ್ದಿಗಳು, ಆಕೆಯ ಹೊಸ ಮನೆಯ ಭವ್ಯತೆಯ ಕುರಿತು ವಿವರಿಸಿದ್ದವು. ಈ ಬಂಗಲೆಯಲ್ಲಿ ಉದ್ಯಾನವೂ ಇದ್ದು, ವೈಯಕ್ತಿಕ ಜಿಮ್ ಹಾಗೂ ದೊಡ್ಡ ಹಿತ್ತಲೂ ಇವೆ ಎಂದು ಸುದ್ದಿಗಳು ತಿಳಿಸಿದ್ದವು.

ಈ ಸುದ್ದಿಯ ಚಿತ್ರವೊಂದನ್ನು ಹಂಚಿಕೊಂಡಿರುವ ಮೀರಾ, ಇದೆಲ್ಲಾ ’ಸುಳ್ಳು’ ಎಂದು ಹೇಳಿದ್ದು, “ಇನ್ಶಾಲ್ಲಾಹ್, ಆ ದಿನ ಬೇಗನೇ ಬರಲಿ.. ಸುದ್ದಿವಾಹಿನಿಗಳ ಪ್ರಾರ್ಥನೆಗಳು ನಿಜವಾಗಲಿ,” ಎಂದು ಹೇಳಿಕೊಂಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular