ಬಳ್ಳಾರಿ: ಯೂರಿಯಾ ಗೊಬ್ಬರ ಅಕ್ರಮ ಪ್ರಕ್ರಣಕ್ಕೆ ಸಂಬಂಧಿಸಿದಂತೆ 5 ಗೊಬ್ಬರ ಮಾರಾಟ ಅಂಗಡಿಗಳ ಲೈಅಸನ್ಸ್ ರದ್ದು ಮಾಡಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
ಯೂರಿಯಾ ಗೊಬ್ಬರ ದಾಸ್ತಾನು ಇದ್ದರೂ ಇಲ್ಲ ಎಂದು ಹೇಳಿ ಅವುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಕಂಪ್ಲಿ ತಾಲೂಕಿನ ಐದು ರಸಗೊಬ್ಬರ ಮತ್ತು ಪರಿಕರ ಮಾರಾಟ ಅಂಗಡಿಗಳ ಪರವಾನಗಿ ರದ್ದು ಮಾಡಲಾಗಿದೆ.
ಈ ಬಗ್ಗೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ಸೋಮಸುಂದರ್ ಮಾಹಿತಿ ನೀಡಿದ್ದಾರೆ. ಕುರಗೋಡಿನಲ್ಲಿ ೫೪ ಚೀಲ ಯೂರಿಯಾವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ರೈತ ಮಹಿಳೆ ವಿರುದ್ಧ ಪ್ರಕರಣ ದಾಖಲಾಗಿದೆ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಕಲಬುರಗಿಯ ಭೀಮಾ ಕೃಷ್ಣಾ ರಾಸಾಯನಿಕ ಮತ್ತು ರಸಗೊಬ್ಬರ ಕಂಪನಿ ಯಲ್ಲಿ ತಯಾರಾದ ಯೂರಿಯಾವನ್ನು ಕುರುಗೋಡಿಗೆ ಅಕ್ರಮವಾಗಿ ತಂದು ವಾಹನದಲ್ಲಿಟ್ಟುಕೊಂಡು ಮಹಿಳೆ ಮಾರಾಟ ಮಾಡುತ್ತಿದ್ದರು. ಈ ವೇಳೆ ಸಿಕ್ಕಿಬಿದ್ದಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಐದು ಅಂಗಡಿಗಳ ಲೈಸನ್ಸ್ ರದ್ದು ಮಾಡಲಾಗಿದೆ ಎಂದು ತಿಳಿಸಿದ್ದಾರೆ.