HomeKarnataka'ಉಪ್ಪಿ ಟೀ' ಖ್ಯಾತಿಯ ಕ್ಯಾಂಟೀನ್ ಮಾಲೀಕ ಸಾವಿಗೆ ಶರಣು!

‘ಉಪ್ಪಿ ಟೀ’ ಖ್ಯಾತಿಯ ಕ್ಯಾಂಟೀನ್ ಮಾಲೀಕ ಸಾವಿಗೆ ಶರಣು!

ಹಾಸನ: ವಿವಿಧ ಬಗೆಯ ಚಹಾ ತಯಾರಿಕೆ ಮೂಲಕ ಜನಪ್ರಿಯರಾಗಿದ್ದ ಉಪ್ಪಿ ಟೀ ಕ್ಯಾಂಟೀನ್ ಮಾಲೀಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರದ ಬಾಗೆ ಗ್ರಾಮದಲ್ಲಿ ನಡೆದಿದೆ.

ಸುರೇಶ್ ಆತ್ಮಹತ್ಯೆಗೆ ಶರಣಾಗಿರುವ ಉಪ್ಪಿ ಟೀ ಕ್ಯಾಂಟೀನ್ ಮಾಲೀಕ. ತಮ್ಮ ಕ್ಯಾಂಟಿನ್ ನ ಒಳಭಾಗದಲ್ಲಿಯೇ ನೇಣಿಗೆ ಕೊರಳೊಡ್ಡಿದ್ದಾರೆ.

ಆತ್ಮಹತ್ಯೆಗೂ ಮುನ್ನ ಸುರೇಶ್ ಬರೆದಿಟ್ಟಿರುವ ಡೆತ್ ನೋಟ್ ಪತ್ತೆಯಾಗಿದ್ದು, ಅದರಲ್ಲಿ ‘ಹಾಸಿಗೆ ಇದ್ದಷ್ಟೇ ಕಾಲು ಚಾಚಬೇಕು. ಯಾರೂ ಸಾಲ ಮಾಡಬೇಡಿ.
ಸಾಲದಿಂದ ಬದುಕು ನಾಶವಾಗುತ್ತದೆ. ನನ್ನ ಸಾವಿಗೆ ಯಾರೂ ಕಾರಣರಲ್ಲ’ ಎಂದು ಬರೆದಿಟ್ಟಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular