HomeIndiaBIG NEWS: ಚಾರ್ಜರ್‌ ನಿಂದ ಫೋನ್ ತೆಗೆಯುವಾಗ ದುರಂತ; ವಿದ್ಯುತ್‌ ಸ್ಪರ್ಶಿಸಿ ಯುವತಿ ಸಾವು

BIG NEWS: ಚಾರ್ಜರ್‌ ನಿಂದ ಫೋನ್ ತೆಗೆಯುವಾಗ ದುರಂತ; ವಿದ್ಯುತ್‌ ಸ್ಪರ್ಶಿಸಿ ಯುವತಿ ಸಾವು

ತನ್ನ ಮೊಬೈಲ್‌ ಫೋನ್‌ ಚಾರ್ಜ್‌ ಮಾಡಲು ಹಾಕಿದ್ದ ಯುವತಿಯೊಬ್ಬರು ಅದನ್ನು ತೆಗೆಯಲು ಹೋದ ವೇಳೆ ವಿದ್ಯುತ್‌ ಶಾಕ್‌ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಇಂತದೊಂದು ಘಟನೆ ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯಲ್ಲಿ ನಡೆದಿದ್ದು, ಸ್ಥಳೀಯ ಗ್ರಾಮವೊಂದರಲ್ಲಿ ಭಾನುವಾರ ಚಾರ್ಜ್‌ನಲ್ಲಿದ್ದ ಫೋನ್ ತೆಗೆಯುವಾಗ ವಿದ್ಯುತ್ ಸ್ಪರ್ಶದಿಂದ ಯುವತಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಸಾರಂಗಪುರ ಗ್ರಾಮದ ನಿವಾಸಿ ನೀತು (22) ತನ್ನ ಮೊಬೈಲ್ ಫೋನ್ ಅನ್ನು ಚಾರ್ಜ್‌ನಿಂದ ತೆಗೆಯುತ್ತಿದ್ದಾಗ ವಿದ್ಯುತ್ ಶಾಕ್ ಹೊಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆಕೆ ಕೂಗಿದ ಸದ್ದು ಕೇಳಿದ ಅಕ್ಕಪಕ್ಕದ ನಿವಾಸಿಗಳು ನೀತು ಫೋನ್‌ ವೈರ್‌ ಗೆ ಅಂಟಿಕೊಂಡಿರುವುದನ್ನು ಗಮನಿಸಿದ ಬಳಿಕ ಕೋಲಿನ ಸಹಾಯದಿಂದ ಆಕೆಯನ್ನು ಬೇರ್ಪಡಿಸಿ ಬನ್ಸ್ಡಿಹ್‌ನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು, ಅಲ್ಲಿ ವೈದ್ಯರು ಆಕೆ ಈಗಾಗಲೇ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಬನ್ಸ್ದಿಹ್ ಪೊಲೀಸ್ ಠಾಣೆಯ ಉಸ್ತುವಾರಿ ಇನ್ಸ್‌ಪೆಕ್ಟರ್ (ಎಸ್‌ಎಚ್‌ಒ) ಸಂಜಯ್ ಸಿಂಗ್ ಮಾತನಾಡಿ, ನೀತು ಅವರನ್ನು ಸರ್ಕಾರಿ ಆಸ್ಪತ್ರೆಗೆ ಕರೆತರಲಾಗಿತ್ತು. ಈ ಪ್ರಕರಣದಲ್ಲಿ ಕುಟುಂಬದವರಿಂದ ಯಾವುದೇ ದೂರು ಬಂದಿಲ್ಲ ಎಂದು ಮಾಹಿತಿ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular