HomeIndiaಮಲಗಿ ವಿರಮಿಸುತ್ತಿದ್ದ ಕಾರ್ಮಿಕನ ಎಚ್ಚರಗೊಳಿಸಲು ಮುಖದ ಮೇಲೆ ಮೂತ್ರ ವಿಸರ್ಜಿಸಿದ ಮಾಲೀಕ

ಮಲಗಿ ವಿರಮಿಸುತ್ತಿದ್ದ ಕಾರ್ಮಿಕನ ಎಚ್ಚರಗೊಳಿಸಲು ಮುಖದ ಮೇಲೆ ಮೂತ್ರ ವಿಸರ್ಜಿಸಿದ ಮಾಲೀಕ

ಲಖನೌ: ಲಖನೌದ ಚಂದೋಯಿಯ ಖೇಡಾ ಗ್ರಾಮದಲ್ಲಿ ಕಲ್ಲು ಗಣಿಯಲ್ಲಿ ಮಲಗಿ ವಿರಮಿಸುತ್ತಿದ್ದ ದಲಿತ ಕೂಲಿ ಕಾರ್ಮಿಕನ ಎಚ್ಚರಗೊಳಿಸಲು ಆತನ ಮುಖದ ಮೇಲೆ ಮಾಲೀಕ ಮೂತ್ರ ವಿಸರ್ಜನೆ ಮಾಡಿದ್ದಾನೆ.

ಭಾನುವಾರ ಮಧ್ಯಾಹ್ನ ಊಟದ ಬಳಿಕ ದಿನಗೂಲಿ ಕಾರ್ಮಿಕ ರಾಜಕುಮಾರ್ ರಾವತ್ ಮಲಗಿ ವಿರಮಿಸುತ್ತಿದ್ದಾಗ ಮಾಲೀಕ ಕೃತ್ಯವೆಸಗಿದ್ದಾನೆ. ರಾಜಕುಮಾರ್ ಅವರು ಕುಟುಂಬದ ಜೊತೆಗೆ ಕಲ್ಲುಗಣಿ ಸಮೀಪವೇ ವಾಸವಾಗಿದ್ದು, ಕೆಲಸದಿಂದ ದಣಿದಿದ್ದ ಅವರು ಮಧ್ಯಾಹ್ನ ಊಟದ ಬಳಿಕ ವಿರಮಿಸಿದ್ದಾರೆ. ಈ ವೇಳೆ ಕಲ್ಲು ಗಣಿಯ ಮಾಲೀಕ ಸಂಜಯ್ ಮೌರ್ಯ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿ ಕೃತ್ಯ ಚಿತ್ರೀಕರಿಸಿಕೊಂಡು ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾನೆ. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸಂತ್ರಸ್ತನ ಪತ್ನಿ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular