HomeCrimeUP Shocker: ಗೆಳೆಯನ ಜೊತೆ ಅನುಚಿತ ಭಂಗಿಯಲ್ಲಿದ್ದ ಅಕ್ಕ; ಪೋಷಕರಿಗೆ ಹೇಳುತ್ತಾನೆಂದು ತಮ್ಮನನ್ನೇ ಕೊಂದ ಸೋದರಿ

UP Shocker: ಗೆಳೆಯನ ಜೊತೆ ಅನುಚಿತ ಭಂಗಿಯಲ್ಲಿದ್ದ ಅಕ್ಕ; ಪೋಷಕರಿಗೆ ಹೇಳುತ್ತಾನೆಂದು ತಮ್ಮನನ್ನೇ ಕೊಂದ ಸೋದರಿ

ತನ್ನ ಬಾಯ್ ಫ್ರೆಂಡ್ ನೊಂದಿಗಿದ್ದ ಅಕ್ಕನನ್ನು ನೋಡಿದ ಬಾಲಕ ವಿಷಯವನ್ನು ಪೋಷಕರಿಗೆ ತಿಳಿಸುತ್ತೇನೆಂದು ಹೇಳಿದ್ದಕ್ಕೆ ಆತನನ್ನು ಅಕ್ಕ ಮತ್ತು ಆಕೆಯ ಗೆಳೆಯ ಸೇರಿ ಹತ್ಯೆ ಮಾಡಿರೋ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಪೋಲೀಸರ ಪ್ರಕಾರ, 18 ವರ್ಷದ ಯುವತಿ ಮತ್ತು ಆಕೆಯ ಗೆಳೆಯನನ್ನು ಯುವತಿಯ ಕಿರಿಯ ಸಹೋದರನ ಕೊಲೆ ಪ್ರಕರಣ ಸಂಬಂಧ ಬಂಧಿಸಲಾಯಿತು.

12ರ ಹರೆಯದ ಬಾಲಕ ತನ್ನ ಸಹೋದರಿ ಮತ್ತು ಆಕೆಯ ಗೆಳೆಯನನ್ನು ಅನುಚಿತ ಭಂಗಿಯಲ್ಲಿ ನೋಡಿದ್ದು, ಪೋಷಕರಿಗೆ ತಿಳಿಸುವುದಾಗಿ ಹೇಳಿದ್ದ ಎಂದು ಪೊಲೀಸರು ಹೇಳಿದ್ದಾರೆ. ಇದರಿಂದ ಕೋಪಗೊಂಡ ಇಬ್ಬರೂ ಕುಡುಗೋಲಿನಿಂದ ಬಾಲಕನ ಕತ್ತು ಕೊಯ್ದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಯಬರೇಲಿ ಪೊಲೀಸ್ ವರಿಷ್ಠಾಧಿಕಾರಿ ಮಾತನಾಡಿ, “ಬಾಲಕನ ಪೋಷಕರು ಮದುವೆಗೆ ಹೋಗಿದ್ದರಿಂದ ಸ್ಥಳೀಯ ನಿವಾಸಿಗಳು ಪೊಲೀಸರಿಗೆ ಕೊಲೆಯ ಬಗ್ಗೆ ಮಾಹಿತಿ ನೀಡಿದ್ದರು. ತನಿಖೆಯ ಸಮಯದಲ್ಲಿ ನಮ್ಮ ಪ್ರಶ್ನೆಗಳಿಗೆ ಮೃತನ ಸಹೋದರಿ ತೃಪ್ತಿದಾಯಕ ಉತ್ತರವನ್ನು ನೀಡಲಿಲ್ಲ. ಹೆಚ್ಚಿನ ವಿಚಾರಣೆ ಮಾಡಿದಾಗ ಸ್ಥಳೀಯ ಯುವಕನೊಬ್ಬ ತನ್ನ ಮನೆಯಲ್ಲಿ ದರೋಡೆಗೆ ಯತ್ನಿಸಿದ್ದ. ಅವನಿಗೆ ಮನೆಯಲ್ಲಿ ಏನೂ ಸಿಗದಿದ್ದಾಗ ದರೋಡೆಕೋರ ತಮ್ಮ ಮೇಲೆ ದಾಳಿ ಮಾಡಿ ತನ್ನ ಸಹೋದರನನ್ನು ಕೊಂದ ಎಂದು ಯುವತಿ ಉತ್ತರಿಸಿದ್ದಳು” ಎಂದು ಎಸ್ಪಿ ಹೇಳಿದರು.

ಪೊಲೀಸರು ಯುವತಿ ಹೆಸರಿಸಿದ ಯುವಕನನ್ನು ವಿಚಾರಿಸಿದಾಗ ಘಟನೆ ನಡೆದ ದಿನ ಆತ ಲಖ್ನೋನಲ್ಲಿದ್ದದ್ದು ಪತ್ತೆಯಾಗಿತ್ತು.ನಂತರ ಯುವತಿ ಮೇಲೆ ಅನುಮಾನಗೊಂಡು ಹೆಚ್ಚಿನ ತನಿಖೆ ನಡೆಸಿದಾಗ ಯುವತಿ ತಪ್ಪೊಪ್ಪಿಕೊಂಡಿದ್ದಳು.

For Latest News Updates, Join Our Whatsapp Community🚩
RELATED ARTICLES

Most Popular