HomeIndiaವರನಿಗೆ ಮಾಲೆ ಹಾಕುತ್ತಿದ್ದಾಗಲೇ ವಧುವಿಗೆ ಮತ್ತೊಬ್ಬ ಯುವಕನಿಂದ ಸಿಂಧೂರ; ಕೊನೆಕ್ಷಣದಲ್ಲಿ ಮದುವೆಯೇ ರದ್ದು...!

ವರನಿಗೆ ಮಾಲೆ ಹಾಕುತ್ತಿದ್ದಾಗಲೇ ವಧುವಿಗೆ ಮತ್ತೊಬ್ಬ ಯುವಕನಿಂದ ಸಿಂಧೂರ; ಕೊನೆಕ್ಷಣದಲ್ಲಿ ಮದುವೆಯೇ ರದ್ದು…!

ಮದುವೆ ನಡೆಯುತ್ತಿದ್ದ ವೇಳೆ ವಧುವಿಗೆ ವ್ಯಕ್ತಿಯೊಬ್ಬ ಸಿಂಧೂರವಿಟ್ಟ ಬಳಿಕ ಮದುವೆ ರದ್ದಾಗಿರೋ ವಿಲಕ್ಷಣ ಘಟನೆ ಉತ್ತರ ಪ್ರದೇಶದ ಗಾಜಿಪುರದಲ್ಲಿ ನಡೆದಿದೆ.

ವರನಿಗೆ ಮಾಲೆ ಹಾಕಲು ಮುಂದಾಗಿದ್ದ ವಧುವಿಗೆ ಇದ್ದಕ್ಕಿದ್ದಂತೆ ಯುವಕನೊಬ್ಬ ಸಿಂಧೂರ ಇಟ್ಟಿದ್ದ. ಆತ ಆಕೆಯನ್ನು ಪ್ರೀತಿಸುತ್ತಿದ್ದ ಎಂದು ವರದಿಯಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಘಟನೆ ನಡೆಯುತ್ತಿದ್ದಂತೆ ಅತಿಥಿಗಳು ವ್ಯಕ್ತಿಯನ್ನ ಹಿಡಿದು ನಿರ್ದಯವಾಗಿ ಥಳಿಸಿದರು. ನಂತರ ಪೊಲೀಸರು ಆತನನ್ನು ವಶಕ್ಕೆ ಪಡೆದರು. ರಾಮಶಿಶ್ ಎಂದು ಗುರುತಿಸಲಾದ ವ್ಯಕ್ತಿ ಮೂಲಗಳ ಪ್ರಕಾರ ವಧುವಿನ ಊರಿನವನೇ ಆಗಿದ್ದ.

ವಧು ಕುಟುಂಬ ದಾಖಲಿಸಿರುವ ಎಫ್‌ಐಆರ್‌ನಲ್ಲಿ ಕಳೆದ ವರ್ಷವೂ ಆರೋಪಿ ಯುವತಿಯ ಮದುವೆಗೆ ಅಡ್ಡಿಪಡಿಸಿ ಬೆದರಿಕೆ ಹಾಕಿದ್ದ ಎಂದು ತಿಳಿಸಿದ್ದಾರೆ. ಆರೋಪಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದು, ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತಿದೆ.

For Latest News Updates, Join Our Whatsapp Community🚩
RELATED ARTICLES

Most Popular