Shocking Video: ಲೇಡಿ ಕಾನ್ಸ್ಟೇಬಲ್‌ ಗೆ ಯುವಕನಿಂದ ಕಪಾಳಮೋಕ್ಷ; ಸಾರ್ವಜನಿಕರ ಸಮ್ಮುಖದಲ್ಲೇ ಮುತ್ತಿಕ್ಕಲು ಯತ್ನ

ಉತ್ತರ ಪ್ರದೇಶದ ಮೊರಾದಾಬಾದ್‌ ನ ರಸ್ತೆಯೊಂದರಲ್ಲಿ ಸಮವಸ್ತ್ರವಿಲ್ಲದೆ ನಡೆದುಕೊಂಡು ಹೋಗುತ್ತಿದ್ದ ಮಹಿಳಾ ಕಾನ್ಸ್‌ಟೇಬಲ್ ಮೇಲೆ ಹಾಡಹಗಲೇ ಯುವಕನೊಬ್ಬ ಹಲ್ಲೆ ನಡೆಸಿದ್ದಾನೆ. ಈ ಘಟನೆಯು ಜನರನ್ನು ಬೆಚ್ಚಿಬೀಳಿಸಿದ್ದು, ಮಹಿಳಾ ಸುರಕ್ಷತೆಯ ಬಗ್ಗೆ ಪ್ರಶ್ನೆ ಏಳುವಂತೆ ಮಾಡಿದೆ.

ಸ್ಥಳದಿಂದ ಸೆರೆ ಹಿಡಿಯಲಾದ ವೀಡಿಯೊದಲ್ಲಿ ಬೈಕ್ ಸವಾರನೊಬ್ಬ ಮಹಿಳಾ ಪೇದೆ ಬಳಿಗೆ ಬರುವುದು ಮತ್ತು ಸ್ವಲ್ಪ ಸಮಯದ ನಂತರ ಅವಳೊಂದಿಗೆ ಅನುಚಿತವಾಗಿ ವರ್ತಿಸುವುದು ದಾಖಲಾಗಿದೆ.

ಬೈಕ್ ಸವಾರ, ಅಮರೀನ್ ಎಂದು ಗುರುತಿಸಲಾದ ಕಾನ್‌ಸ್ಟೆಬಲ್‌ಗೆ ಕಪಾಳಮೋಕ್ಷ ಮಾಡಿ ಅವರನ್ನು ಅನುಚಿತವಾಗಿ ಸ್ಪರ್ಶಿಸಿದ್ದಾನೆ. ಅಲ್ಲದೇ ಮುತ್ತಿಕ್ಕಲು ಪ್ರಯತ್ನಿಸಿದ್ದಾನೆ.

ಏತನ್ಮಧ್ಯೆ, ಅಲ್ಲಿದ್ದ ವೃದ್ಧರೊಬ್ಬರು ಬೈಕ್ ಸವಾರನ ಕೃತ್ಯವನ್ನು ತಡೆದು ಅಮರೀನ್ ಅವರನ್ನು ಬಿಡಿಸಲು ಪ್ರಯತ್ನಿಸುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದಾಗಿದೆ.

ಅಷ್ಟರಲ್ಲಿ ವೃದ್ದ ವ್ಯಕ್ತಿ ನೆರವಿಗೆ ಮತ್ತಷ್ಟು ಯುವಕರು ಬಂದಿದ್ದು, ಮಹಿಳಾ ಪೇದೆ ಮೇಲೆ ದಾಳಿ ಮಾಡುತ್ತಿದ್ದ ಯುವಕನನ್ನು ಹಿಡಿದುಕೊಂಡಿದ್ದಾರೆ. ಬಳಿಕ ಅಮರೀನ್‌ ಸ್ಥಳೀಯ ಪೊಲೀಸ್‌ ಠಾಣೆಗೆ ಕರೆ ಮಾಡಿದ್ದಾರೆ.

ಈಗ ದಾಖಲಾದ ಪ್ರಕರಣದಲ್ಲಿ, ಅಮರೀನ್ ತನ್ನ ಖಾಸಗಿ (ಕರ್ತವ್ಯವಿಲ್ಲದ) ಸಮಯದಲ್ಲಿ ಯುವಕ ನಿಂದನೆ ಮತ್ತು ಹಲ್ಲೆ ನಡೆಸಿದ್ದಾನೆ ಎಂದು ಉಲ್ಲೇಖಿಸಿದ್ದಾರೆ.

ಮುಂದಿನ ಕ್ರಮದ ಕುರಿತು ವಿಷಯ ತಿಳಿಸಿರುವ ಮೊರಾದಾಬಾದ್ ಪೊಲೀಸರು, ಮಹಿಳಾ ಪೇದೆಯ ಪ್ರಕರಣವನ್ನು ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಬಿಡುಗಡೆ ಮಾಡಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read