Shocking: ಪೊಲೀಸ್‌ ವ್ಯಾನಿನಲ್ಲಿ ಅವರ ಮುಂದೆಯೇ ಸಿಗರೇಟ್‌ ಸೇದಿದ ಬಂಧಿತ ಆರೋಪಿ

ಲಖನೌ: ಉತ್ತರ ಪ್ರದೇಶದ ಬಾಗ್‌ಪತ್‌ನಿಂದ ಆಘಾತಕಾರಿ ವಿಡಿಯೋವೊಂದು ಹೊರಬಿದ್ದಿದ್ದು, ಬಂಧಿತ ಆರೋಪಿಯೊಬ್ಬ ಪೊಲೀಸ್ ವ್ಯಾನ್‌ನಲ್ಲಿ ಯಾವುದೇ ಭಯವಿಲ್ಲದೆ ಸಿಗರೇಟ್ ಸೇದುತ್ತಿರುವುದನ್ನು ಕಾಣಬಹುದು.

ಈ ವೈರಲ್ ವೀಡಿಯೊದಲ್ಲಿ, ಪೊಲೀಸ್ ಜೀಪಿನೊಳಗೆ ಆರೋಪಿ ಕುಳಿತಿರುವುದನ್ನು ನೋಡಬಹುದು. ಆತನ ಕೈಯಲ್ಲಿ ಕೈಕೋಳವಿದೆ. ಈತ ಪೊಲೀಸ್ ಜೀಪಿನಲ್ಲಿ ಧೂಮಪಾನ ಮಾಡುತ್ತಾ ರೀಲ್ಸ್​ ಮಾಡುತ್ತಿದ್ದಾನೆ.

ಬಂಧಿತನನ್ನು ಅನಾಸ್ ಅಲಿಯಾಸ್ ಅನೀಶ್ ಎಂದು ಗುರುತಿಸಲಾಗಿದ್ದು, ಈತನನ್ನು ಪೊಲೀಸರು ಈಗ ಜೈಲಿಗೆ ಕಳುಹಿಸಿದ್ದಾರೆ.

ಇದೇ ವೇಳೆ ಜೀಪಿನಲ್ಲಿ ಕರೆದುಕೊಂಡು ಹೋಗುವಾಗ ಸಿಗರೇಟ್ ಸೇದುವ ರೀಲ್ಸ್​ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ. ಸದ್ಯ ಬಾಗ್‌ಪತ್‌ನ ಈ ವಿಡಿಯೋ ಜನರಲ್ಲಿ ಚರ್ಚೆಗೆ ಗ್ರಾಸವಾಗಿದೆ.

ವೀಡಿಯೊ ವೈರಲ್ ಆದ ಕೂಡಲೇ, ಬಾಗ್‌ಪತ್ ಪೊಲೀಸರು ಅದನ್ನು ಗಮನದಲ್ಲಿಟ್ಟುಕೊಂಡು ವೀಡಿಯೊದಲ್ಲಿ ಕಂಡುಬರುವ ಪೊಲೀಸ್ ಅಧಿಕಾರಿಯ ವಿರುದ್ಧ ಮತ್ತಷ್ಟು ಕಠಿಣ ಕ್ರಮ ಕೈಗೊಂಡಿದ್ದಾರೆ. ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದ್ದಕ್ಕಾಗಿ ಕಪಿಲ್ ಎಂಬ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ ಎಂದು ಬಾಗ್‌ಪತ್ ಪೊಲೀಸರು ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

https://twitter.com/sachingupta787/status/1636935312634003462?ref_src=twsrc%5Etfw%7Ctwcamp%5Etweetembed%7Ctwterm%5E1636935312634003462%7Ctwgr%5Ee3af6e2aa24f11bb4930aaf99469b1c1fc3a0476%7Ctwcon%5Es1_&ref_url=https%3A%2F%2Fwww.freepressjournal.in%2Findia%2Fup-arrested-criminal-smokes-cigarette-in-police-van-baghpat-police-cracks-down-on-officials-after-video-goes-viral

https://twitter.com/baghpatpolice/status/1636795132711141381?ref_src=twsrc%5Etfw%7Ctwcamp%5Etweetembed%7Ctwterm%5E1636795132711141381%7Ctwgr%5Ee3af6e2aa24f11bb4930aaf99469b1c1fc3a0476%7Ctwcon%5Es1_&ref_url=https%3A%2F%2Fwww.freepressjournal.in%2Findia%2Fup-arrested-criminal-smokes-cigarette-in-police-van-baghpat-police-cracks-down-on-officials-after-video-goes-viral

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read