10 ಲಕ್ಷ ರೂ. ಮೌಲ್ಯದ 400 ಪಾರಿವಾಳಗಳು ಕಳ್ಳರ ಪಾಲು

ಉತ್ತರ ಪ್ರದೇಶದ ಮೀರತ್‌ನಲ್ಲಿ 65 ವರ್ಷದ ವೃದ್ಧರೊಬ್ಬರ ಮನೆಯಿಂದ ಸುಮಾರು 400 ಪಾರಿವಾಳಗಳನ್ನು ಕಳ್ಳತನ ಮಾಡಲಾಗಿದೆ. ಕಳ್ಳತನವಾದ ಪಾರಿವಾಳಗಳ ಮೌಲ್ಯ 10 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಮೊಹಮ್ಮದ್ ಕಯ್ಯೂಮ್ ಅವರು ಮೊಘಲ್ ಕಾಲದಿಂದಲೂ ನಡೆದುಕೊಂಡು ಬಂದಿರುವ ‘ಕಬೂತರ್ಬಾಜಿ’ ಎಂಬ ಪಾರಿವಾಳ ರೇಸಿಂಗ್ ಕ್ರೀಡೆಯನ್ನು ಮುಂದುವರಿಸಿಕೊಂಡು ಬಂದಿದ್ದರು. ಅವರು ತಮ್ಮ ಮನೆಯ ಟೆರೇಸ್ ಮೇಲೆ ಪಾರಿವಾಳಗಳಿಗೆ ಗೂಡುಗಳನ್ನು ನಿರ್ಮಿಸಿ ಅವುಗಳನ್ನು ಸಾಕುತ್ತಿದ್ದರು.

ಸೋಮವಾರ ಬೆಳಿಗ್ಗೆ ಪಾರಿವಾಳಗಳನ್ನು ನೋಡಲು ಟೆರೇಸ್‌ಗೆ ಹೋದಾಗ ಎಲ್ಲಾ ಗೂಡುಗಳು ಖಾಲಿಯಾಗಿರುವುದು ಕಂಡುಬಂದಿದೆ. “ನಾನು 400 ಪಾರಿವಾಳಗಳನ್ನು ಕಳೆದುಕೊಂಡಿದ್ದೇನೆ. ಅವುಗಳ ಮೌಲ್ಯ ಸುಮಾರು 10 ಲಕ್ಷ ರೂ.ಗಳು. ಭಾನುವಾರ ರಾತ್ರಿ ಕಳ್ಳರು ಅವುಗಳನ್ನು ಕದ್ದಿರಬಹುದು” ಎಂದು ಕಯ್ಯೂಮ್ ಹೇಳಿದ್ದಾರೆ.

ಕಳ್ಳತನವಾದ ಪಾರಿವಾಳಗಳಲ್ಲಿ ಕೆಲವು ವಿದೇಶಿ ತಳಿಗಳಾಗಿದ್ದು, ಅವು ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದವು ಎಂದು ಅವರು ತಿಳಿಸಿದ್ದಾರೆ.

ಈ ಬಗ್ಗೆ ಲಿಸಾಡಿ ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. “ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಕಳ್ಳರು ಏಣಿಯನ್ನು ಬಳಸಿ ಟೆರೇಸ್‌ಗೆ ಪ್ರವೇಶಿಸಿದ್ದಾರೆಂದು ತೋರುತ್ತದೆ. ಕೇವಲ ಪಾರಿವಾಳಗಳನ್ನು ಮಾತ್ರ ಕದ್ದಿದ್ದಾರೆ” ಎಂದು ಮೀರತ್‌ನ ಎಸ್‌ಪಿ ಸಿಟಿ ಅಯುಷ್ ವಿಕ್ರಮ್ ಸಿಂಗ್ ಹೇಳಿದ್ದಾರೆ.

ಕಯ್ಯೂಮ್ ಅವರ ಪಾರಿವಾಳಗಳು ಸ್ಥಳೀಯವಾಗಿ ಬಹಳ ಜನಪ್ರಿಯವಾಗಿದ್ದವು. ಪಕ್ಷಿ ಪ್ರಿಯರು ಅವುಗಳನ್ನು ನೋಡಲು ಆಗಾಗ್ಗೆ ಬರುತ್ತಿದ್ದರು. “ಯಾರಿಗೂ ತಿಳಿಯದಂತೆ ನೂರಾರು ಪಾರಿವಾಳಗಳನ್ನು ಟೆರೇಸ್‌ನಿಂದ ಕಳ್ಳರು ಹೇಗೆ ತೆಗೆದುಕೊಂಡು ಹೋದರು ಎಂಬುದು ಆಶ್ಚರ್ಯಕರವಾಗಿದೆ” ಎಂದು ಕಯ್ಯೂಮ್ ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read