ಡಾಬಾ ಆಗಿ ಬದಲಾಯ್ತು ಟೊಯೋಟಾ ಫಾರ್ಚೂನರ್ ಕಾರ್….!

ಭಾರತೀಯರಲ್ಲಿ ಟೊಯೋಟಾ ಫಾರ್ಚೂನರ್‌ ಕ್ರೇಜ್‌ ಹೆಚ್ಚಿದೆ. ದೊಡ್ಡ ಸೆಲೆಬ್ರಿಟಿಗಳಿಂದ ಹಿಡಿದು ರಾಜಕಾರಣಿಗಳವರೆಗೆ ಅನೇಕರು ಈ ಟೊಯೋಟಾ ಫಾರ್ಚೂನರ್ ನಲ್ಲಿ ಪ್ರಯಾಣ ಬೆಳೆಸಲು ಇಷ್ಟಪಡ್ತಾರೆ.

ಆದ್ರೆ ವ್ಯಕ್ತಿಯೊಬ್ಬ ಟೊಯೋಟಾ ಫಾರ್ಚೂನರನ್ನು ಸಂಚಾರಿ ಡಾಬಾ ಮಾಡಿಕೊಂಡಿದ್ದಾನೆ. ಸಾಮಾಜಿಕ ಜಾಲತಾಣ ಇನ್ಟ್ಟಾಗ್ರಾಮ್‌ ನಲ್ಲಿ ಇದ್ರ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ದಾರಿ ಬದಿಯಲ್ಲಿ ಟೊಯೋಟಾ ಫಾರ್ಚೂನರ್ ನಿಲ್ಲಿಸಿ ಅದ್ರಲ್ಲಿ ಆಹಾರ ಸರ್ವ್‌ ಮಾಡ್ತಿರೋದನ್ನು ನೀವು ವಿಡಿಯೋದಲ್ಲಿ ಕಾಣಬಹುದಾಗಿದೆ. ಇದಕ್ಕೆ ಫಾರ್ಚೂನರ್ ರೆಸ್ಟೋರೆಂಟ್‌ ಎಂದು ಹೆಸರಿಡಲಾಗಿದೆ.

ಇದ್ರ ಮಾಲೀಕರು, ಗ್ರಾಹಕರಿಗೆ ಟೊಯೋಟಾ ಫಾರ್ಚೂನರ್ ಒಳಗೆ ಕುಳಿತು ಆಹಾರ ಸೇವನೆ ಮಾಡುವ ಅವಕಾಶವನ್ನೂ ನೀಡಿದ್ದಾರೆ. ನೀವು ಹೊರಗೆ ನಿಂತು ತಿನ್ನಿ ಇಲ್ಲ ಕಾರಿನ ಒಳಗೆ ಕುಳಿತು ತಿನ್ನಿ ಬೆಲೆ ಒಂದೇ ಎನ್ನುತ್ತಾರೆ ಮಾಲೀಕರು. ಟೊಯೋಟಾ ಫಾರ್ಚೂನರ್ ಹಳೆ ಕಾರು ಇದಲ್ಲ. ಹೊಸ ವೆರಿಯೆಂಟ್‌ ಆಗಿದೆ. ಇದ್ರಲ್ಲಿ ಸಿಗವ ಆಹಾರದ ಬೆಲೆ ಭಿನ್ನವಾಗಿದೆ. ಕೆಲ ಆಹಾರಕ್ಕೆ ನೂರು ರೂಪಾಯಿ ಚಾರ್ಜ್‌ ಮಾಡೋದಾಗಿ ಮಾಲೀಕರು ಹೇಳಿದ್ದಾರೆ.

ದುಬಾರಿ ಕಾರ್‌ ನಲ್ಲಿ ಆಹಾರ ಮಾರಾಟ ಮಾಡ್ತಿರೋದು ಇದೇ ಮೊದಲಲ್ಲ. ಸಾಮಾಜಿಕ ಜಾಲತಾಣದಲ್ಲಿ ಅನೇಕ ವಿಡಿಯೋಗಳು ಈಗಾಗಲೇ ವೈರಲ್‌ ಆಗಿವೆ. ಈ ಹಿಂದೆ ಆಡಿ ಕಾರ್‌ ನಲ್ಲಿ ಟೀ ಮಾರಾಟ ಮಾಡ್ತಿದ್ದ ವ್ಯಕ್ತಿಯೊಬ್ಬರ ವಿಡಿಯೋ ವೈರಲ್‌ ಆಗಿತ್ತು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read