HomeIndiaBREAKING NEWS: ಕೇಂದ್ರ ಸಚಿವ ನಿತ್ಯಾನಂದ ರೈ ಸೋದರಳಿಯರ ನಡುವೆ ಗುಂಡಿನ ದಾಳಿ: ಓರ್ವ ಸಾವು

BREAKING NEWS: ಕೇಂದ್ರ ಸಚಿವ ನಿತ್ಯಾನಂದ ರೈ ಸೋದರಳಿಯರ ನಡುವೆ ಗುಂಡಿನ ದಾಳಿ: ಓರ್ವ ಸಾವು

ಪಾಟ್ನಾ: ಕೇಂದ್ರ ಸಚಿವ ನಿತ್ಯಾನಂದ ರೈ ಸೋದರಳಿಯರ ನಡುವೆ ಗುಂಡಿನ ಕಾಳಗ ನಡೆದಿದ್ದು, ಗುಂಡೇಟಿಗೆ ಓರ್ವ ಸಾವನ್ನಪ್ಪಿರುವ ಘಟನೆ ಬಿಹಾರದ ನವಗಟಿಯಾದಲ್ಲಿ ನಡೆದಿದೆ.

ನಿತ್ಯಾನಂದ ರೈ ಕೇಂದ್ರ ಗೃಹ ಖಾತೆ ರಾಜ್ಯ ಸಚಿವರಾಗಿದ್ದು, ಅವರ ಸಹೋದರಿಯರ ಮಕ್ಕಳ ನಡುವೆ ಗಲಾಟೆ ನಡೆದು ಪರಸ್ಪರ ಫೈರಿಂಗ್ ನಡೆಸಿದ್ದಾರೆ. ವಿಶ್ವಜಿತ್ ಹಾಗೂ ಜೈಜಿತ್ ನಡುವೆ ಗುಂಡಿನ ದಾಳಿ ನಡೆದಿದೆ.

ಗುಂಡಿನ ದಾಳಿಯಲ್ಲಿ ಸಚಿವರ ಓರ್ವ ಸೋದರಳಿಯ ಸಾವನ್ನಪ್ಪಿದ್ದಾರೆ ಎಂದು ತಿಳಿಬಂದಿದೆ. ಕುಡಿಯುವ ನೀರಿನ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಜಗಳ ಗುಂಡಿನ ದಾಳಿಗೆ ಕಾರಣವಾಗಿದ್ದು, ಕೊಲೆಯಲ್ಲಿ ಅಂತ್ಯವಾಗಿದೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ತನಿಖೆ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular