HomeIPL 2026ಆಟಗಾರರು ಗರ್ಲ್‌ಫ್ರೆಂಡ್‌ಗಳನ್ನು ರೂಮಿಗೆ ಕರೆತರುತ್ತಿದ್ದಾರೆ, ನಾವು ಎಲ್ಲವನ್ನೂ ನೋಡುತ್ತಿದ್ದೇವೆ: ಪಾಂಡ್ಯಗೆ ತಿವಿದ ಬಿಸಿಸಿಐ; ವಿಡಿಯೊ

ಆಟಗಾರರು ಗರ್ಲ್‌ಫ್ರೆಂಡ್‌ಗಳನ್ನು ರೂಮಿಗೆ ಕರೆತರುತ್ತಿದ್ದಾರೆ, ನಾವು ಎಲ್ಲವನ್ನೂ ನೋಡುತ್ತಿದ್ದೇವೆ: ಪಾಂಡ್ಯಗೆ ತಿವಿದ ಬಿಸಿಸಿಐ; ವಿಡಿಯೊ

ಪ್ರಸ್ತುತ ನಡೆಯುತ್ತಿರುವ 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳಿಂದ ಮಾತ್ರವಲ್ಲದೇ ಮೈದಾನದಿಂದಾಚೆಗೆ ಆಟಗಾರರ ವೈಯಕ್ತಿಕ ವಿಷಯಗಳಿಂದಲೂ ಸುದ್ದಿಯಾಗುತ್ತಿದೆ.

ಅದರಲ್ಲೂ ಪ್ರಮುಖವಾಗಿ ಹಾರ್ದಿಕ್ ಪಾಂಡ್ಯ ತನ್ನ ಜತೆ ತನ್ನ ಪ್ರೇಯಸಿ ಮಹಿಕಾ ಶರ್ಮಾಳನ್ನು ಹೋದಲ್ಲೆಲ್ಲ ಕರೆದೊಯ್ಯುತ್ತಿದ್ದದ್ದು, ಮುಂಬೈ ಇಂಡಿಯನ್ಸ್ ಬಸ್‌ನಲ್ಲಿ ಬರಲು ಬಿಟ್ಟುಕೊಂಡಿದ್ದನ್ನು ಕಂಡು ನೆಟ್ಟಿಗರು ಐಪಿಎಲ್ ಈ ಹಿಂದಿನಂತೆ ಇಲ್ಲ, ಯಾವುದೇ ನಿಯಮವಿಲ್ಲ, ಆಟಗಾರರಲ್ಲಿ ಶಿಸ್ತಿಲ್ಲ ಎಂದಿದ್ದರು.

ಸದ್ಯ ಆಟಗಾರರ ಇಂತಹ ವರ್ತನೆಗೆ ಬಿಸಿಸಿಐ ಪ್ರತಿಕ್ರಿಯಿಸಿದ್ದು, ಕಟ್ಟುನಿಟ್ಟಿನ ಸಲಹೆಗಳನ್ನು ಹೊರಡಿಸುವುದಾಗಿ ತಿಳಿಸಿದೆ. ಈ ಕುರಿತು ಇಂದು ( ಮೇ 7 ) ಸಂಜೆ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಮಾತನಾಡಿ ಆಟಗಾರರಿಗೆ ಕಟ್ಟುನಿಟ್ಟಿನ ಸಲಹೆಯ ಎಚ್ಚರಿಕೆ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

‘ಈ ಬಾರಿಯ ಆವೃತ್ತಿಯಲ್ಲಿ ವಿವಿಧ ಫ್ರಾಂಚೈಸಿಗಳು ಹಾಗೂ ಅವುಗಳ ಆಟಗಾರರು ನಿಯಮಕ್ಕೆ ವಿರುದ್ಧವಾದ ಪ್ರಕ್ರಿಯೆಗಳಲ್ಲಿ ತೊಡಗಿಕೊಂಡಿರುವುದನ್ನು ಗಮನಿಸಿದ್ದೇವೆ. ಹೀಗಾಗಿ ಬಿಸಿಸಿಐ ಹಾಗೂ ಐಪಿಎಲ್ ಸಲಹಾ ಪಟ್ಟಿಯನ್ನು ತಯಾರಿಸಿದ್ದು ಸಂಜೆ ಅದನ್ನು ಬಿಡುಗಡೆ ಮಾಡುತ್ತಿದ್ದೇವೆ. ಕೆಲ ಅನಧಿಕೃತ ವ್ಯಕ್ತಿಗಳು ಆಟಗಾರರ ಜತೆ ಅಲೆದಾಡುವುದನ್ನು ಕಂಡಿದ್ದೇವೆ. ಕೆಲ ಅನಧಿಕೃತ ವ್ಯಕ್ತಿಗಳು ಹೊಟೇಲ್‌ಗೆ ಬಂದು, ಆಟಗಾರರ ಹಾಗೂ ಸಿಬ್ಬಂದಿಗಳ ಕೋಣೆಗಳಿಗೂ ಆಗಮಿಸುತ್ತಿದ್ದಾರೆ. ಇದು ನಮ್ಮ ಭ್ರಷ್ಟಾಚಾರ ವಿರೋಧ ನೀತಿಗೆ ವಿರುದ್ಧವಾಗಿದೆ’ ಎಂದು ದೇವಜಿತ್ ಸೈಕಿಯಾ ತಿಳಿಸಿದ್ದಾರೆ.

ಮುಂದುವರಿದು ಮಾತನಾಡಿದ ಅವರು ‘ಕೆಲ ಫ್ರಾಂಚೈಸಿಯ ಮಾಲೀಕರು ಹಾಗೂ ಸಿಬ್ಬಂದಿ ಆಟಗಾರರ ಜತೆ ಅನುಮತಿ ಇಲ್ಲದ ಸ್ಥಳಗಳಲ್ಲಿ ಭೇಟಿಯಾಗಿದ್ದನ್ನು ಕಂಡಿದ್ದೇವೆ. ಹೀಗಾಗಿ ಕೆಲ ಶಿಷ್ಟಾಚಾರಗಳನ್ನು ಪಾಲಿಸಬೇಕಿದ್ದು, ಅವುಗಳನ್ನು ಕೆಲವರು ದುರ್ಬಲಗೊಳಿಸಿದ್ದು ಗಮನಕ್ಕೆ ಬಂದಿದೆ. ಇವುಗಳನ್ನು ನಾವು ಗಂಭೀರವಾಗಿ ಪರಿಗಣಿಸಿ ಸಲಹೆಗಳನ್ನು ಬಿಡುಗಡೆ ಮಾಡಲಿದ್ದೇವೆ. ಅವುಗಳನ್ನು ಕಡ್ಡಯಾವಾಗಿ ಗಂಭೀರವಾಗಿ ಪಾಲಿಸಬೇಕು. ಅವುಗಳನ್ನು ಯಾರಾದರೂ ಮೀರಿದ್ದನ್ನು ಕಂಡರೆ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ’ ಎಂದು ತಿಳಿಸಿದರು.

ಈ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಎಷ್ಟೇ ಟೀಕೆ ಬಂದರೂ ಆ ಟೀಕೆಗಳಿಗೆ ಪ್ರತಿಕ್ರಿಯೆ ನೀಡುವುದಕ್ಕಾಗಿ ಇನ್ನೂ ಹೆಚ್ಚು ಕಾಲ ಪ್ರೇಯಸಿಯನ್ನು ಕರೆ ತಂದು ಹಾರಾಡುತ್ತಿದ್ದ ಹಾರ್ದಿಕ್ ಪಾಂಡ್ಯ ಸೊಕ್ಕನ್ನು ಇಳಿಸಲು ಬಿಸಿಸಿಐ ಮುಂದಾಗಿದೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular