
ಅವಳು ಧೂಳನ್ನು ಬ್ರಷ್ ಮಾಡಿದಾಗ, ಕ್ಯಾಡ್ಬರಿಯ ವಿಶಿಷ್ಟವಾದ ನೇರಳೆ ಪ್ಯಾಕೇಟ್ ಕಂಡಿದೆ. ಆಯತಾಕಾರದ ರಟ್ಟನ್ನು ತೆಗೆದು ನೋಡಿದಾಗ ಅದರೊಳಗೆ ಚಾಕಲೇಟ್ ಇರಲಿಲ್ಲ. ಅದರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಕುತೂಹಲದಿಂದ, ಈಕೆ ಮಿಠಾಯಿ ಕಂಪೆನಿಯನ್ನು ಸಂಪರ್ಕಿಸಿದಾಗ ಇದು 1930-1934 ರ ನಡುವೆ ಉತ್ಪಾದಿಸಲ್ಪಟ್ಟಿದೆ ಎಂದು ತಿಳಿದುಬಂದಿದೆ.
ನನಗೆ ಈ ವಿಷಯ ತುಂಬಾ ಅಚ್ಚರಿಯಾಯಿತು. ನನ್ನನ್ನು ತುಂಬಾ ದಿಗ್ಭ್ರಮೆಗೊಳಿಸಿದ ವಿಷಯವಿದು. ಇದು ಸುಮಾರು 100 ವರ್ಷಗಳಷ್ಟು ಹಳೆಯದು ಎಂದರೆ ಯಾರೂ ನಂಬುವುದಿಲ್ಲ.ಇದರ ಒಂದು ಬದಿ ಇಲಿಗಳಿಂದ ತಿನ್ನಲ್ಪಟ್ಟಿದ್ದರೆ ಇನ್ನೊಂದು ಬದಿ ಇನ್ನೂ ಚೆನ್ನಾಗಿದೆ ಎಂದಿದ್ದಾರೆ.

