‘ಅಪಾಯಕಾರಿ’ ಅಮೆರಿಕನ್ XL ಬುಲ್ಲಿ ತಳಿ ನಾಯಿ ನಿಷೇಧ: ಯುಕೆ ಪಿಎಂ ರಿಷಿ ಸುನಕ್ ಘೋಷಣೆ

ಅಮೆರಿಕನ್ ಎಕ್ಸ್‌ ಎಲ್ ಬುಲ್ಲಿ ಎಂದು ಕರೆಯಲ್ಪಡುವ ಅಪಾಯಕಾರಿ ತಳಿಯ ನಾಯಿಯನ್ನು ನಿಷೇಧಿಸಲು ಬ್ರಿಟೀಷ್ ಪ್ರಧಾನಿ ರಿಷಿ ಸುನಕ್ ಶುಕ್ರವಾರ ಪ್ರತಿಜ್ಞೆ ಮಾಡಿದ್ದಾರೆ.

ಎಕ್ಸ್‌ ಎಲ್ ಬುಲ್ಲಿ ನಾಯಿಗಳಿಂದ ಹಿಂದೆ ಹಲವಾರು ದಾಳಿ ನಡೆದಿವೆ. ಇತ್ತೀಚಿಗೆ ಸ್ಟಾಫರ್ಡ್‌ ಶೈರ್‌ ನಲ್ಲಿ ವ್ಯಕ್ತಿಯ ಸಾವಿನ ಹಿಂದೆ ಎಕ್ಸ್‌ ಎಲ್ ಬುಲ್ಲಿ ದಾಳಿ ಕಾರಣವಾಗಿದೆ. ಇಂತಹ ನಾಯಿಗಳ ಮಿತಿಮೀರಿದ ಭಯಾನಕ ದಾಳಿಗಳ ಬಗ್ಗೆ ಸಾರ್ವಜನಿಕರು ಅಭಿಪ್ರಾಯ, ದೂರು ಹಂಚಿಕೊಂಡಿದ್ದಾರೆ.

ಈ ಕಾರಣದಿಂದ ಅಮೇರಿಕನ್ XL ಬುಲ್ಲಿ ನಾಯಿ ತಳಿಯನ್ನು ನಿಷೇಧಿಸಲು ತುರ್ತು ಆದೇಶ ನೀಡಿದ್ದಾರೆ ಎಂದು ರಿಷಿ ಸುನಕ್ ವಿಡಿಯೋ ಸಂದೇಶ ನೀಡಿದ್ದಾರೆ.

ಕಳೆದ ವಾರ ಬರ್ಮಿಂಗ್‌ಹ್ಯಾಮ್‌ನಲ್ಲಿ 11 ವರ್ಷದ ಬಾಲಕಿಯೊಬ್ಬಳು ಇದೇ ತಳಿಯ ದಾಳಿಗೆ ತುತ್ತಾಗಿ ಗಂಭೀರವಾಗಿ ಗಾಯಗೊಂಡಿದ್ದಳು. ಅಮೇರಿಕನ್ XL ಬುಲ್ಲಿ ನಾಯಿಯು ನಮ್ಮ ಸಮುದಾಯಗಳಿಗೆ, ವಿಶೇಷವಾಗಿ ನಮ್ಮ ಮಕ್ಕಳಿಗೆ ಅಪಾಯಕಾರಿಯಾಗಿದೆ ಎಂದು ಸುನಕ್ 10 ಡೌನಿಂಗ್ ಸ್ಟ್ರೀಟ್‌ ನಲ್ಲಿ ರೆಕಾರ್ಡ್ ಮಾಡಿದ ಸಂದೇಶದಲ್ಲಿ ಹೇಳಿದ್ದಾರೆ.

https://twitter.com/RishiSunak/status/1702630698178236756

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read