ಜೀವನಪರ್ಯಂತ ಪ್ರಾಣಿಗಳನ್ನು ಸಾಕುವಂತಿಲ್ಲ ಈತ; ಕುತೂಹಲಕಾರಿಯಾಗಿದೆ ಇದರ ಹಿಂದಿನ ಕಾರಣ

ವ್ಯಕ್ತಿಯೊಬ್ಬ ತನ್ನ ಗಲೀಜಾದ ಮನೆಯಲ್ಲಿನ ಚಿಕ್ಕ-ಪುಟ್ಟ ಪಂಜರಗಳಲ್ಲಿ ಪ್ರಾಣಿಗಳನ್ನಿಟ್ಟುಕೊಂಡಿದ್ದ ಪ್ರಕರಣ ಯುಕೆನಲ್ಲಿ ಬೆಳಕಿಗೆ ಬಂದಿದೆ. ಸುದ್ದಿ ತಿಳಿದ ಕೂಡಲೇ ದಾಳಿ ಮಾಡಿದ ಪೊಲೀಸರು ಒಂದು ಕ್ಷಣ ಅವಾಕ್ಕಾಗಿದ್ದಾರೆ.

ಕೆಟ್ಟ ವಾಸನೆಯಿಂದ ತುಂಬಿದ್ದ ಮನೆಯಲ್ಲಿ ಆತ, ಒಟ್ಟು 167 ಜೀವಿಗಳಲ್ಲಿ ಮೊಲಗಳು, ಹ್ಯಾಮ್ಸ್ಟರ್‌ಗಳು, ಇಲಿಗಳು, ಗಿಳಿಗಳು ಸೇರಿದಂತೆ ಅನೇಕ ಪ್ರಾಣಿಗಳು ಪತ್ತೆಯಾಗಿವೆ. ಅದರಲ್ಲಿ ಹಲವು ಪ್ರಾಣಿಗಳು ಸತ್ತುಬಿದ್ದಿದ್ದು, ಕೆಟ್ಟ ವಾಸನೆ ಬರುತ್ತಿದ್ದವು.

61 ವರ್ಷ ವಯಸ್ಸಿನ ಕಿಮ್ ಸ್ಟಾರ್ಕ್ಸ್ ಎಂಬಾತ ಈ ರೀತಿ ದುರ್ನಾತ ಬೀರುತ್ತಿದ್ದ ಸ್ಥಳದಲ್ಲಿ ಪ್ರಾಣಿಗಳನ್ನು ಕೂಡಿ ಹಾಕಿದ್ದ. ಪ್ರಾಣಿಗಳಿಗೆ ಅನಗತ್ಯವಾಗಿ ಶಿಕ್ಷಿಸಿದ ಈತನ ಮೇಲೆ ಪ್ರಕರಣ ದಾಖಲಾಗಿದೆ. ಇನ್ಮುಂದೆ ಯಾವುದೇ ಪ್ರಾಣಿಯನ್ನು ಈತ ಸಾಕುವಂತಿಲ್ಲ ಎಂದು ಆದೇಶ ಹೊರಡಿಸಲಾಗಿದೆ.

ಅಧಿಕಾರಿಗಳು ಮೊದಲಿಗೆ ರಶ್ಡೆನ್‌ನಲ್ಲಿರುವ ಮನೆಗೆ ಭೇಟಿ ನೀಡಿದಾಗ, ಅವರು ಪ್ರಾಣಿಗಳಿಂದ ತುಂಬಿದ ಮನೆಯನ್ನು ನೋಡಿ ಶಾಕ್ ಗೆ ಒಳಗಾದ್ರು. ಯಾಕಂದ್ರೆ ಭಯಾನಕ ರೀತಿಯಲ್ಲಿದ್ದ ಆ ಸ್ಥಳದಲ್ಲಿ ಒಟ್ಟು 167 ಜೀವಿಗಳನ್ನು ಪಂಜರಗಳಲ್ಲಿ ಒಂದರ ಮೇಲೊಂದು ಜೋಡಿಸಿ, ಪ್ಯಾಕ್ ಮಾಡಲಾಗಿತ್ತು. ಇದೀಗ ಈ ಪ್ರಾಣಿಗಳನ್ನು ರಕ್ಷಿಸಲಾಗಿದ್ದು, ಆರೋಪಿ ವಿರುದ್ಧ ಕೇಸ್ ದಾಖಲಿಸಲಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read