ಬೆಂಗಳೂರು: UGNEET-26 ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್ ಗಳ ಎರಡನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಸೆ.7ರಿಂದ ಆರಂಭವಾಗಲಿದೆ.
ಮೊದಲನೇ ಸುತ್ತಿನಲ್ಲಿ ಚಾಯ್ಸ್-2 ಮತ್ತು ಚಾಯ್ಸ್- 3 ಆಯ್ಕೆ ಮಾಡಿರುವವರು, ಮೊದಲನೇ ಸುತ್ತಿನಲ್ಲಿ ಸೀಟು ಹಂಚಿಕೆಯಾಗದಿರುವವರು ಹಾಗೂ ಯುಜಿಸಿಇಟಿ ಎರಡನೇ ಸುತ್ತಿನ ನಂತರ ಚಾಯ್ಸ್-4 ಹಾಕಿ ಹೊರ ಹೋಗಿರುವವರು (ವೈದ್ಯಕೀಯ ಮತ್ತು ದಂತ ವೈದ್ಯಕೀಯ ಆಪ್ಷನ್ಸ್ ಇರುವವರು) ಈ ಸುತ್ತಿನಲ್ಲಿ ಭಾಗವಹಿಸಲು ಅರ್ಹರು.
ಇವರು ಸೆ.7ರಂದು ಮಧ್ಯಾಹ್ನ 2ಗಂಟೆಯಿಂದ ಸೆ.9ರಂದು ಮಧ್ಯಾಹ್ನ 2ಗಂಟೆವರೆಗೆ ಪೋರ್ಟಲ್ ನಲ್ಲಿ ಲಾಗಿನ್ ಆಗಿ ಆಪ್ಷನ್ಸ್ ಸೇವ್ ಮಾಡಬೇಕು. ಇದರ ಬಳಿಕ ತಾತ್ಕಾಲಿಕ ಫಲಿತಾಂಶ ಪ್ರಕಟಿಸಲಾಗುತ್ತದೆ. ಹೆಚ್ಚಿನ ವಿವರಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA) ವೆಬ್ ಸೈಟ್ ನೋಡುವಂತೆ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.
ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸುಗಳ ಪ್ರವೇಶಾತಿ
ಎರಡನೇ ಸುತ್ತಿನ ಸೀಟು ಹಂಚಿಕೆ ತಾತ್ಕಾಲಿಕ ಫಲಿತಾಂಶ ಛಾಟ್ಸ್-4 ನಂತರ ಅಂತಿಮ ಫಲಿತಾಂಶ
ಎರಡನೇ ಸುತ್ತಿನಲ್ಲಿ ಭಾಗವಹಿಸಲು ಅರ್ಹತೆ:
ಈ ಕೆಳಗಿನ ವರ್ಗದ ಅಭ್ಯರ್ಥಿಗಳು ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸುಗಳ ಎರಡನೇ ಸುತ್ತಿನ ಸೀಟು ಹಂಚಿಕೆಯಲ್ಲಿ ಭಾಗವಹಿಸಬಹುದು;
ಎ) ಯುಜಿನೀಟ್-2026 ಮೊದಲನೇ ಸುತ್ತಿನ ಸೀಟು ಹಂಚಿಕೆಗೆ Choice-2 or Choice-3 ಆಯ್ಕೆ ಮಾಡಿರುವವರು; ಮತ್ತು
ಏ) ಮೊದಲನೇ ಸುತ್ತಿನಲ್ಲಿ ಯಾವುದೇ ಸೀಟು ಹಂಚಿಕೆಯಾಗದಿರುವವರು; ಹಾಗೂ
ಐ) ಯುಜಿಸಿಇಟಿ ಕೋರ್ಸುಗಳ ಎರಡನೇ ಸುತ್ತಿನ ಸೀಟು ಹಂಚಿಕೆಯ ನಂತರ ಛಾಯ್ಸ್-4 ಅನ್ನು ಆಯ್ಕೆ ಮಾಡಿರುವ ಅಭ್ಯರ್ಥಿಗಳು ಅವರ options list ನಲ್ಲಿ ಮೆಡಿಕಲ್ / ಡೆಂಟಲ್ ಇದ್ದರೆ ಭಾಗವಹಿಸಬಹುದು.
ಆಪ್ಪನ್ ಎಂಟ್ರಿ ಕುರಿತ ಸೂಚನೆಗಳು:
a) ಆಪ್ಪನ್ ಎಂಟ್ರಿ: 07-09-2026 ರ ಮಧ್ಯಾಹ್ನ 2.00 ರಿಂದ 09-09-2026 ರ ಮಧ್ಯಾಹ್ನ 2.00 ರ ವರೆಗೆ
b) ಎರಡನೇ ಸುತ್ತಿನಲ್ಲಿ ಅಪ್ಪನ್ ಎಂಟ್ರಿ ಮಾಡಲು ನಿಗದಿ ಪಡಿಸುವ ಕೊನೆಯ ದಿನಾಂಕದ ಒಳಗೆ ಲಾಗಿನ್ ಪೋರ್ಟಲ್ ನಲ್ಲಿ ಲಾಗಿನ್ ಮಾಡಿ ಅಪ್ಪನ್‌ಗಳನ್ನು save ಮಾಡಿ ಸಲ್ಲಿಸುವುದು ಕಡ್ಡಾಯವಾಗಿದೆ.
c) ರದ್ದುಗೊಳ್ಳಬಹುದಾದ / ಮುಟ್ಟುಗೋಲು ಹಾಕಿಕೊಳ್ಳಬಹುದಾದ / ಹೊಸದಾಗಿ ಸೇರ್ಪಡೆಯಾಗುವ ಸೀಟುಗಳೇನಾದರು ಇದ್ದಲ್ಲಿ ಅಂತಹ ಸೀಟುಗಳನ್ನು ಪ್ರಕಟಿಸುವುದರಿಂದ, ಪ್ರಾಧಿಕಾರದ ವೆಬ್ ಸೈಟನ್ನು ಆಗಿಂದಾಗ್ಗೆ ಪರಿಶೀಲಿಸಿ.
d) ಸೀಟು ಹಂಚಿಕೆಯ ಸಂದರ್ಭದಲ್ಲಿ, ಉದ್ಭವಿಸುವ ಸೀಟುಗಳನ್ನೂ ಸಹ ಹಂಚಿಕೆಗೆ ಪರಿಗಣಿಸುವುದರ ಕಾರಣ, ಸೀಟ್ ಮ್ಯಾಟ್ರಿಕ್ಸ್ ನಲ್ಲಿ ಲಭ್ಯತೆ ಇಲ್ಲದಿದ್ದರೂ ಸಹ ಕಾಲೇಜಿಗೆ ಸೇರ ಬಯಸುವ ಅಪ್ಪನ್‌ಗಳನ್ನು ಅಭ್ಯರ್ಥಿಗಳು ಉಳಿಸಿಕೊಳ್ಳಬಹುದಾಗಿದೆ.
e) ಅಂತಿಮವಾಗಿ ಸಲ್ಲಿಸುವ ಅಪ್ಪನ್‌ಗಳ ಲಿಸ್ಟ್ ಅನ್ನು ಮುದ್ರಿಸಿಟ್ಟುಕೊಳ್ಳಲು ಸಲಹೆ ನೀಡಿದೆ.
ವರ್ಚುಯಲ್ ಖಾಲಿ ಸೀಟುಗಳು:
a) ಮೊದಲನೆ ಸುತ್ತಿನಲ್ಲಿ ಹಂಚಿಕೆಯಾದ ಸೀಟಿಗೆ ಛಾಯ್ಸ್-2 ನೀಡಿರುವ ಸೀಟುಗಳು ವರ್ಚುಯಲ್ ಖಾಲಿ ಸೀಟುಗಳು.
b) ಎರಡನೇ ಸುತ್ತಿನಲ್ಲಿ ಹೊಸ ಸೀಟು ಅಪ್‌ಗ್ರೇಡ್ ಆದಲ್ಲಿ ಮೊದಲ ಸುತ್ತಿನ ಛಾಯ್ಸ್-2 ಸೀಟು ಖಾಲಿಯಾಗುತ್ತದೆ;
c) ಈ ರೀತಿ ಖಾಲಿಯಾಗುವ ಛಾಯ್ಸ್-2 ಸೀಟುಗಳನ್ನು ಅರ್ಹ ಅಭ್ಯರ್ಥಿಗಳಿಗೆ ಎರಡನೇ ಸುತ್ತಿನಲ್ಲಿಯೇ ಹಂಚಿಕೆಗೆ ಪರಿಗಣಿಸಲಾಗುತ್ತದೆ. ಆದ್ದರಿಂದ ಆಸಕ್ತಿ ಇದ್ದಲ್ಲಿ ತಮ್ಮ ಆಪ್ಪನ್ ಲಿಸ್ಟ್ ನಲ್ಲಿ ಈ ಸೀಟುಗಳನ್ನು ಉಳಿಸಿಕೊಳ್ಳಬಹುದು.
ತಾತ್ಕಾಲಿಕ ಫಲಿತಾಂಶ: ದಿನಾಂಕವನ್ನು ನಂತರ ಪ್ರಕಟಿಸಲಾಗುವುದು.
ಅಭ್ಯರ್ಥಿಗಳು ದಾಖಲಿಸಿದ ಅಪ್ಪನ್‌ಗಳನ್ನು ಹಾಗೂ ಮೆರಿಟ್ ಆಧಾರದ ಮೇಲೆ ನಿಯಮಾನುಸಾರ ವೈದ್ಯಕೀಯ ಮತ್ತು ದಂತವೈದ್ಯಕೀಯ ಕೋರ್ಸುಗಳ 2ನೇ ಸುತ್ತಿನ ಸೀಟು ಹಂಚಿಕೆಯನ್ನು ನಡೆಸಿ ತಾತ್ಕಾಲಿಕ ಫಲಿತಾಂಶವನ್ನು ಪ್ರಕಟಿಸಲಾಗುವುದು.
ಭಾಯ್ಸ್-4 ನೀಡಬಹುದು: ದಿನಾಂಕವನ್ನು ನಂತರ ಪ್ರಕಟಿಸಲಾಗುವುದು.
a) ತಾತ್ಕಾಲಿಕ ಫಲಿತಾಂಶವನ್ನು ಪರಿಶೀಲಿಸಿದ ನಂತರ ಹಂಚಿಕೆಯಾಗಿರುವ ಸೀಟು ಅಭ್ಯರ್ಥಿಗೆ ಇಷ್ಟವಿಲ್ಲದಿದ್ದಲ್ಲಿ ಅಥವಾ MCC /ಇತರೆ ರಾಜ್ಯಗಳಲ್ಲಿ ಸೀಟು ದೊರೆತಿರುವ ಕಾರಣ ಅಭ್ಯರ್ಥಿಯು ಲಾಗಿನ್ ಮಾಡಿ ಛಾಯ್ಸ್-4 ಅನ್ನು ಆಯ್ಕೆ ಮಾಡಿಕೊಂಡು ಪ್ರಸಕ್ತ ಸಾಲಿನ ಯುಜಿನೀಟ್ ಕೌನ್ಸಿಲಿಂಗ್ ನಿಂದ ಹೊರಗೆ ಹೋಗಬಹುದು.
b) Choice-4 ಅನ್ನು ಆಯ್ಕೆ ಮಾಡಿದ ನಂತರ ಪುನಃ ಸೀಟು ಹಂಚಿಕೆಗೆ ಪರಿಗಣಿಸಲಾಗುವುದಿಲ್ಲ.
UGNEET-26: ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್ ಗಳ ಎರಡನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಸೆ.7ರಿಂದ ಆರಂಭವಾಗಲಿದೆ.
ಮೊದಲನೇ ಸುತ್ತಿನಲ್ಲಿ ಚಾಯ್ಸ್-2 ಮತ್ತು ಚಾಯ್ಸ್- 3 ಆಯ್ಕೆ ಮಾಡಿರುವವರು, ಮೊದಲನೇ ಸುತ್ತಿನಲ್ಲಿ ಸೀಟು ಹಂಚಿಕೆಯಾಗದಿರುವವರು ಹಾಗೂ ಯುಜಿಸಿಇಟಿ ಎರಡನೇ ಸುತ್ತಿನ ನಂತರ ಚಾಯ್ಸ್-4 ಹಾಕಿ ಹೊರ ಹೋಗಿರುವವರು (ವೈದ್ಯಕೀಯ… pic.twitter.com/dx1PR9vNsf
— ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA (@KEA_karnataka) September 6, 2026

