HomeKarnatakaಉದ್ಯೋಗ ಖಾತರಿ ಕಾಂಗ್ರೆಸ್ ಕಾರ್ಯಕ್ರಮ ಮಾತ್ರವಲ್ಲ ದೇಶದ ಕಾರ್ಯಕ್ರಮ

ಉದ್ಯೋಗ ಖಾತರಿ ಕಾಂಗ್ರೆಸ್ ಕಾರ್ಯಕ್ರಮ ಮಾತ್ರವಲ್ಲ ದೇಶದ ಕಾರ್ಯಕ್ರಮ

ವಿಕಸಿತ್‌ ಭಾರತ್‌ – ರೋಜ್‌ಗಾರ್‌ ಮತ್ತು ಅಜೀಕಾ ಮಿಷನ್‌ (ಗ್ರಾಮೀಣ) (ವಿ-ಬಿ-ಜಿ-ರಾಮ್‌-ಜಿ) ಕಾಯ್ದೆ ಅನುಷ್ಠಾನ ವಿರೋಧಿಸಿ ಕರ್ನಾಟಕ ಕಾಂಗ್ರೆಸ್ ಚಿಕ್ಕಬಳ್ಳಾಪುರದಲ್ಲಿ ಸೋಮವಾರ ಬೃಹತ್ ಹೋರಾಟ ಹಮ್ಮಿಕೊಂಡಿತ್ತು.

‘ನರೇಗಾ ಬಚಾವ್‌ ಆಂದೋಲನ’ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಹಾಗೂ ಸಿಎಂ ಸಿದ್ದರಾಮಯ್ಯ ಪಾಲ್ಗೊಂಡಿದ್ದರು.

ವಿಬಿ-ಜಿರಾಮ್-ಜಿ ಯೋಜನೆ ಅನುಷ್ಠಾನ ಖಂಡಿಸಿ ಹಾಗೂ ಮನರೇಗಾ ಯೋಜನೆ ಪುನರ್ ಸ್ಥಾಪನೆಗೆ ಆಗ್ರಹಿಸಿ ನಡೆಸಿದ ಹೋರಾಟದಲ್ಲಿ ಪಾಲ್ಗೊಂಡಿದ್ದ ಡಿ.ಕೆ.ಶಿವಕುಮಾರ್, “ಈ ದೇಶವನ್ನು ಉಳಿಸುವುದಕ್ಕಾಗಿ ನರೇಗಾ ಬಚಾವೋ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ” ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

“ನಾನು ಯಾವಾಗಲೂ ಹೇಳುತ್ತೇನೆ ಕಾಂಗ್ರೆಸ್ ಶಕ್ತಿ ಈ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ಈ ದೇಶದ ಇತಿಹಾಸ. ಕಾಂಗ್ರೆಸ್ ಯಾವಾಗಲೂ ಎಲ್ಲ ವರ್ಗದ ಜನರಿಗೆ ನಾವು ಕಾರ್ಯಕ್ರಮ ಕೊಟ್ಟು, ಬದುಕಿನಲ್ಲಿ ಬದಲಾವಣೆ ತರುವಂತ ಕೆಲಸ ನಾವು ಮಾಡಿಕೊಂಡು ಬರುತ್ತಿದ್ದೇವೆ” ಎಂದರು.

“20 ವರ್ಷದ ಹಿಂದೆ ಬಡವರಿಗೆ ಉದ್ಯೋಗವನ್ನು ಕಲ್ಪಿಸುವ, ಅವರ ಕೈಗಳಿಗೆ ಕೆಲಸ ಕೊಡುವ ಮನರೇಗಾ ಇಡೀ ದೇಶದಲ್ಲೇ ಕ್ರಾಂತಿಕಾರಕ ಕಾರ್ಯಕ್ರಮವಾಗಿತ್ತು. ಉದ್ಯೋಗ ಖಾತರಿ ಯೋಜನೆ ಕಾಂಗ್ರೆಸ್ ಕಾರ್ಯಕ್ರಮ ಮಾತ್ರವಲ್ಲ. ಇಡೀ ದೇಶದ ಕಾರ್ಯಕ್ರಮ. ದೇಶದ ಬಡ ಜನರ ಕಾರ್ಯಕ್ರಮ” ಎಂದು ತಿಳಿಸಿದರು.

“ಬಡವರಿಗೆ ಕೂಲಿ ಕೆಲಸಗಳನ್ನು ಕೊಟ್ಟು ಅವರಿಗೆ ಆತ್ಮಸ್ಥೈರ್ಯವನ್ನು ತುಂಬುವಂತ ಕಾರ್ಯಕ್ರಮ. ಮನರೇಗಾ ಯೋಜನೆಯನ್ನು ಉಳಿಸಿ, ಉದ್ಯೋಗ ಹಕ್ಕನ್ನು ಉಳಿಸಿ, ಗ್ರಾಮಗಳ ಸ್ವಯಂ ಆಡಳಿತದ ಹಕ್ಕನ್ನ ಮರು ಸ್ಥಾಪನೆ ಮಾಡುವ ಉದ್ದೇಶದಿಂದ ನಾವು ಇಂದು ಈ ಹೋರಾಟ ಹಮ್ಮಿಕೊಂಡಿದ್ದೇವೆ” ಎಂದರು.

ಈ ಹೋರಾಟದಲ್ಲಿ ಸಚಿವರಾದ ಕೆ.ಹೆಚ್.ಮುನಿಯಪ್ಪ, ಬೈರತಿ ಸುರೇಶ್‌, ಎನ್.ಎಸ್.ಬೋಸರಾಜು ಪಾಲ್ಗೊಂಡಿದ್ದರು. ಹಲವಾರು ಸಚಿವರು, ಶಾಸಕರು, ಪಕ್ಷದ ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular