HomeUncategorizedಕೂಡ್ಲು ಫಾಲ್ಸ್ ಗೆ ಪ್ರವಾಸಿಗರ ನಿಷೇಧ: ಅರಣ್ಯ ಇಲಾಖೆಯಿಂದ ಮಹತ್ವದ ಆದೇಶ

ಕೂಡ್ಲು ಫಾಲ್ಸ್ ಗೆ ಪ್ರವಾಸಿಗರ ನಿಷೇಧ: ಅರಣ್ಯ ಇಲಾಖೆಯಿಂದ ಮಹತ್ವದ ಆದೇಶ

ಉಡುಪಿ: ರಾಜ್ಯಾದ್ಯಂತ ಮುಂಗಾರು ಮಳೆ ಚುರುಕುಗೊಂಡಿದೆ. ಕರಾವಳಿ ಜಿಲ್ಲೆಗಳಲ್ಲಿ ವರುಣಾರ್ಭಟ ಜೋರಾಗಿದ್ದು, ನದಿ, ಹಳ್ಳ-ಕೊಳ್ಳ, ಜಲಧಾರೆಗಳು ತುಂಬಿ ಹರಿಯುತ್ತಿವೆ. ಜಲಪಾತಗಳು ಬೋರ್ಗರೆದು ಧುಮ್ಮಿಕ್ಕಿ ಹರಿಯುತ್ತಿವೆ. ಈ ಹಿನ್ನೆಲೆಯಲ್ಲಿ ಹಲವು ಪ್ರವಾಸಿ ತಾಣಗಳಿಗೆ ಸಾರ್ವಜನಿಕರು, ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ.

ಉಡುಪಿ ಜಿಲ್ಲೆಯ ಕೂಡ್ಲು ಫಾಲ್ಸ್ ಗೆ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ. ಜುಲೈ ಆರಂಭದಲ್ಲಿ ಮಳೆಯ ಅಬ್ಬರ ಜೋರಾಗಿದೆ. ಇದರಿಂದ ಉಡುಪಿಯ ಪ್ರಸಿದ್ಧ ಫಾಲ್ಸ್ ಹೆಬ್ರಿ ತಾಲೂಕಿನಲ್ಲಿರುವ ಕೂಡ್ಲು ಜಲಪಾತ ಧುಮ್ಮಿಕ್ಕಿ ಹರಿಯುತ್ತಿದೆ. ಫಾಲ್ಸ್ 150-ಅಡಿ ಕಲ್ಲಿನ ಬಂಡೆಯ ಕೆಳಗೆ ಬೋರ್ಗರೆಯುತ್ತಿದ್ದು, ಜಲಧಾರೆಯ ಸೊಬಗು ರುದ್ರರಮಣೀಯವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಪ್ರವಾಸಿಗರಿಗೆ ಫಾಲ್ಸ್ ಪ್ರವೇಶ ನಿಷೇಧಿಸಲಾಗಿದೆ. ಮಳೆಗಾಲದಲ್ಲಿ ನಯನ ಮನೋಹರವಾಗಿ ಕಾಣುವ ಫಾಲ್ಸ್ ಅಷ್ಟೇ ಅಪಾಯಕಾರಿಯಾಗಿದೆ. ಪ್ರವಾಸಿಗರು ಬಂದು ಯಾವುದೇ ಪ್ರಾಣಪಾಯಕ್ಕೆ ಒಳಗಾಗಬಹುದು ಎನ್ನುವ ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಗೇಟ್ ಹಾಕಿ ಫಾಲ್ಸ್ ದಾರಿ ಬಂದ್ ಮಾಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular