ಊರಲ್ಲಿ ಸಮಾಜ ಸೇವಕ; ಮನೆಯಲ್ಲಿ ಪತ್ನಿ-ಮಗಳಿಗೆ ಹಿಂಸಕ: ಆಪದ್ಬಾಂದವನ ಅಸಲಿ ಮುಖ ಬಯಲು

ಉಡುಪಿ: ಸಮಾಜ ಸೇವಕನೊಬ್ಬನ ಕರಾಳ ಮುಖವೊಂದು ಬಯಲಾಗಿದ್ದು, ಊರಿಗೆ ಉಪಕಾರಿ, ಮನೆಗೆ ಮಾರಿ ಎಂಬ ಮಾತು ಈತನಿಗೆ ಅನ್ವಯವಾಗುವಂತಿದೆ.

ಆಪದ್ಬಾಂದವನೆಂದೇ ಹೆಸರಾಗಿರುವ ಮೊಹಮ್ಮದ್ ಆಸೀಫ್ ಎಂಬಾತ ಊರಲ್ಲಿ ದೊಡ್ಡ ಸಮಾಜ ಸೇವಕ ಎಂದು ಬಿಂಬಿಸಿಕೊಂಡವನು. ಆದರೆ ಮನೆಯಲ್ಲಿ ಮಾತ್ರ ಮೃಗೀಯ ವರ್ತನೆ ತೋರಿದ್ದಾನೆ. ಹೆಂಡತಿ-ಮಕ್ಕಳನ್ನು ಹೊಡೆಯುವುದು, ಹಿಂಸಿಸುವುದೇ ಈತನ ಕೆಲಸವಾಗಿದೆ. ಅಲ್ಲದೇ ಮಗಳ ವಿಡಿಯೋವನ್ನೇ ವೈರಲ್ ಮಾಡಿದ್ದಾನೆ.

ಉಡುಪಿ ಜಿಲ್ಲೆಯ ಕಾಪುವಿನಲ್ಲಿರುವ ಆಸೀಫ್ ಸಮಾಜ ಸೇವಕನೆಂದೇ ಜಿಲ್ಲೆಯಲ್ಲಿ ಹೆಸರಾಗಿದ್ದಾನೆ. ಮಾದಕ ವ್ಯಸನಿಗಳು, ಮಾನಸಿಕ ಅಸ್ವಸ್ತರಿಗೆ ಪುನರ್ವಸತಿ ಕಲ್ಪಿಸುವುದಾಗಿ ಹೇಳಿಕೊಳ್ಳುವ ಹಾಗೂ ಆಂಬುಲನ್ಸ್ ಕೂಡ ಇಟ್ಟು ಜನಸೇವೆಗಾಗಿ ಕಾರ್ಯನಿರ್ವಹಿಸುತ್ತಿರುವವನಂತೆ ತನ್ನನ್ನು ಬಿಂಬಿಸಿಕೊಂಡಿದ್ದಾನೆ. ಆದರೆ ಈತನ ಕರಾಳ ಮುಖವೀಗ ಬಯಲಾಗಿದೆ. ಮನೆಯಲ್ಲಿ ಪತ್ನಿ ಹಾಗೂ ಮಗಳ ಮೇಲೆ ಹಲ್ಲೆ ನಡೆಸಿ, ಕಾಲಿನಿಂದ ಒದೆಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಲ್ಲದೇ ಸ್ವಂತ ಮಗಳ ವಿಡಿಯೋವನ್ನು ಅಶ್ಲೀಲವಾಗಿ ಎಡಿಟ್ ಮಾಡಿ ವೈರಲ್ ಮಾಡಿದ್ದಾನೆ ಕಿರಾತಕ.

2021ರಿಂದಲೂ ಆಸೀಫ್ ಪತ್ನಿ ಹಾಗೂ ಮಕ್ಕಳಿಗೆ ಹಿಂಸಿಸುತ್ತಿದ್ದು, ಹಲವು ಬಾರಿ ಪತ್ನಿ ಪೊಲೀಸರಿಗೆ ದೂರು ನೀಡಲು ಹೋದರೂ ಆಸೀಫ್ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳದೇ ಪೊಲೀಸರು ರಾಜಿ ಮಾತನಾಡಿ ಕಳುಹಿಸುತ್ತಿದ್ದಾರೆ. ಪತಿ ಹಿಂಸೆಗೆ ಬೇಸತ್ತ ಪತ್ನಿ ಮಾಧ್ಯಮಗಳ ಮುಂದೆ ಕಣ್ಣೀರಿಟ್ಟಿದ್ದಾರೆ. ಊರಿಗೆ ಮಾತ್ರ ದೊಡ್ಡ ಸಮಾಜ ಸೇವಕ. ಆದರೆ ಮನೆಯಲ್ಲಿ ಮಾತ್ರ ಆಸೀಫ್ ನಮಗೆಲ್ಲರಿಗೂ ಹಿಂಸೆ ನೀಡುತ್ತಾನೆ ಎಂದಿದ್ದಾರೆ.

ಮಗಳ ವಿಡಿಯೋವನ್ನು ಅಶ್ಲೀಲವಾಗಿ ಎಡಿಟ್ ಮಾಡಿ ವೈರಲ್ ಮಾಡಿದ್ದು, ಮಗಳು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆಕೆಯನ್ನು ರಕ್ಷಿಸಿ ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಸದ್ಯ ಪತಿ ಆಸೀಫ್ ವಿರುದ್ಧ ಪತ್ನಿ ದೂರು ದಾಖಲಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read