HomeKarnatakaSHOCKING NEWS: ನಮಾಜ್ ಮಾಡುತ್ತಿದ್ದಾಗಲೇ ಕುಸಿದುಬಿದ್ದ ವ್ಯಕ್ತಿ; ಹೃದಯಾಘಾತದಿಂದ ಸಾವು

SHOCKING NEWS: ನಮಾಜ್ ಮಾಡುತ್ತಿದ್ದಾಗಲೇ ಕುಸಿದುಬಿದ್ದ ವ್ಯಕ್ತಿ; ಹೃದಯಾಘಾತದಿಂದ ಸಾವು

ಉಡುಪಿ: ವ್ಯಕ್ತಿಯೋರ್ವ ನಮಾಜ್ ಮಾಡುತ್ತಿದ್ದಾಗಲೇ ಕುಸಿದು ಬಿದ್ದು, ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಉಡುಪಿಯಲ್ಲಿ ನಡೆದಿದೆ.

ಉಡುಪಿ ಜಿಲ್ಲೆಯ ಸಿಟಿ ಬಸ್ ನಿಲ್ದಾಣದ ಬಳಿ ಅಂಜುಮಾನ್ ಮಸೀದಿಯಲ್ಲಿ ಈ ದುರಂತ ಸಂಭವಿಸಿದೆ. ದೊಡ್ಡಣಗುಡ್ಡೆಯ ಕರಂಬಳ್ಳಿ ನಿವಾಸಿ ಮುಸ್ತಾಕ್ (55) ಮೃತರು.

ನಮಾಜ್ ಮಾಡಲೆಂದು ಮಸೀದಿಗೆ ಬಂದಿದ್ದ ಮುಸ್ತಾಕ್ ಕುಳಿತಲ್ಲಿಯೇ ಕುಸಿದು ಬಿದ್ದಿದ್ದಾರೆ. ನಮಾಜ್ ಮಡುತ್ತಿದ್ದ ಇತರರು ಆರಂಭದಲ್ಲಿ ಅಷ್ಟಾಗಿ ಗಮನಿಸಿಲ್ಲ. ಮುಸ್ತಾಕ್ ಮೇಲೆ ಏಳದಿರುವುದನ್ನು ಕಂಡು ಇತರರು ಬಂದು ಅವರನ್ನು ಎಬ್ಬಿಸಲು ಯತ್ನಿಸಿದ್ದಾರೆ. ಆದರೂ ಮೇಲೆ ಎದ್ದಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಕ್ಷಣ ಅವರನ್ನು ಸ್ಥಳೀಯ ಆಸ್ಪತೆಗೆ ದಾಖಲಿಸಲಾಗಿತ್ತು. ಅಷ್ಟರಲ್ಲೇ ಮುಸ್ತಾಕ್ ಕೊನೆಯುಸಿರೆಳೆದಿದ್ದರು.

For Latest News Updates, Join Our Whatsapp Community🚩
RELATED ARTICLES

Most Popular