HomeLatest NewsBIG NEWS: ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾದ ತಂದೆ: ಅವರನ್ನು ರಕ್ಷಿಸಲು ಹೋದ ಮಗನೂ ಸಾವು!

BIG NEWS: ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾದ ತಂದೆ: ಅವರನ್ನು ರಕ್ಷಿಸಲು ಹೋದ ಮಗನೂ ಸಾವು!

ಉಡುಪಿ: ತಂದೆಯೊಬ್ಬ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದು, ಆತನನ್ನು ರಕ್ಷಿಸಲು ಬಾವಿಗಿಳಿದ ಮಗನೂ ಸಾವನ್ನಪ್ಪಿರುವ ದಾರುಣ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ತೆಕ್ಕಟ್ಟೆಯಲ್ಲಿ ನಡೆದಿದೆ.

ಮಾದವ ದೇವಾಡಿಗ (55) ಹಾಗೂ ಮಗ ಪ್ರಸಾದ್ ದೇವಾಡಿಗ (22) ಮೃತ ದುರ್ದೈವಿಗಳು. ಪತಿ ಬಾವಿಗೆ ಹಾರುತ್ತಿದ್ದಂತೆ ಪತ್ನಿ ಕೂಡ ಬಾವಿಗೆ ಹಾರಿದ್ದರು. ಸದ್ಯ ಅವರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಾದವ ದೇವಾಡಿಗ ಕುಟುಂಬ ಕುಂದಾಪುರದ ಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಇದ್ದಕ್ಕಿದ್ದಂತೆ ಮಾದವ ದೇವಾಡಿಗ ಇಂದು ಬಾವಿಗೆ ಹಾರಿದ್ದಾರೆ. ತಂದೆ ಬಾವಿಗೆ ಹಾರುತ್ತಿದ್ದಂತೆ ಅವರನ್ನು ರಕ್ಷಿಸಲೆಂದು ಮಗ ಬಾವಿಗಿಳಿದಿದ್ದಾರೆ. ಆದರೆ ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular