ನಿನ್ನೆ ( ಆಗಸ್ಟ್ 3 ) ತಂಜಾವೂರಿನಲ್ಲಿ ಕಾವೇರಿ ನೀರು ಹಂಚಿಕೆ ವಿಚಾರವಾಗಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ತಮಿಳುನಾಡು ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರನ್ನು ಟೀಕಿಸುವ ಭರದಲ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ.
ವಿಜಯ್ ಅವರನ್ನು ಟೀಕಿಸುತ್ತಾ “ನಮ್ಮ ಮುಖ್ಯಮಂತ್ರಿ ಕಾವೇರಿ ನೀರಿನ ಬಗ್ಗೆ ಬಾಯಿ ತೆರೆಯುತ್ತಿಲ್ಲ. ಡಿಎಂಕೆ ವಿರುದ್ಧ ಸುಳ್ಳು ಪ್ರಕರಣಗಳನ್ನು ಹೂಡುವುದೇ ಅವರ ಚಿಂತೆ” ಎಂದು ಹೇಳಿದರು.ಈ ವೇಳೆ ಗುಂಪಿನಿಂದ “ತ್ರಿಶಾ… ತ್ರಿಶಾ…” ಎಂದು ಕೂಗಾಟ ಪ್ರಾರಂಭವಾಯಿತು. ಆಗ ಉದಯನಿಧಿ ನಗುತ್ತಾ “ನಮಗೆ ನೀರು ಬರುತ್ತೋ ಇಲ್ವೋ ಅಲ್ಲಿಗೆ ನೀರು ಹೋಗಬೇಕು” ಎಂದು ಹೇಳಿಕೆ ನೀಡಿದರು.
ಇದು ತ್ರಿಶಾ ವಿರುದ್ಧ ನೀಡಿದ ಡಬಲ್ ಮೀನಿಂಗ್ ಹೇಳಿಕೆ ಎಂದು ಟಿವಿಕೆ ಹಾಗೂ ಬಿಜೆಪಿ ಪಕ್ಷದ ಕಾರ್ಯಕರ್ತರು ಕಿಡಿಕಾರಿದರು. ಉದಯನಿಧಿ ಸ್ಟಾಲಿನ್ ವಿರುದ್ಧ ಎಫ್‌ಐಆರ್ ಸಹ ದಾಖಲಾಗಿ ಇಂದು ( ಆಗಸ್ಟ್ 4 ) ಅವರ ನಿವಾಸಕ್ಕೆ ತೆರಳಿದ ಪೊಲೀಸರು ಬಂಧನ ಮಾಡಿದ್ದಾರೆ.
ಈ ವೇಳೆ ಉದಯನಿಧಿ ಸ್ಟಾಲಿನ್ ಮನೆಯಲ್ಲಿ ಹೈಡ್ರಾಮಾವೇ ನಡೆದಿದ್ದು, ಬಂಧನಕ್ಕೆಂದು ತೆರಳಿದ ಕಮಿಷನರ್ ಕಾಯುವಂತಾಯಿತು. ಹತ್ತು ನಿಮಿಷ ಬರುತ್ತಾರೆ ಎಂದು ಉದಯನಿಧಿ ಪತ್ನಿ ಪೊಲೀಸರ ಜತೆ ಹೇಳಿ ಹಲವು ಸಮಯ ಕಳೆದರೂ ಬಾರದೇ ಇದ್ದ ಕಾರಣ ಕಮಿಷನರ್ ತಡವಾಯಿತು ಬಂಧಿಸಿ ಕರೆದೊಯ್ಯಬೇಕು ಅವರನ್ನು ಕರೆಯಿರಿ ಎಂದು ಮತ್ತೊಮ್ಮೆ ಕೇಳಿದರು. ಈ ಸಮಯದಲ್ಲಿ ಮತ್ತೊಮ್ಮೆ ಉದಯನಿಧಿ ಪತ್ನಿ ಇನ್ನೂ ಹತ್ತು ನಿಮಿಷ ಸಮಯ ಕೊಡಿ ಎಂದು ಕೇಳಿದ್ದು, ಇದಕ್ಕೆ ಕೋಪಗೊಂಡ ಕಮಿಷನರ್ ಇನ್ನೆಷ್ಟು ಹತ್ತು ನಿಮಿಷಗಳು ಹೀಗೆ ಇರಬೇಕು, ತಡವಾಯಿತು ಆಚೆ ಕರೆಯಿರಿ ಎಂದು ಕಿಡಿಕಾರಿದ್ದಾರೆ.
ಈ ಘಟನೆಯ ವಿಡಿಯೊ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಟ್ರೋಲ್‌ಗೂ ಸಹ ಒಳಗಾಗಿದೆ.
https://x.com/polimernews/status/2084504589978513900?s=20

