HomeAutoಸಶಸ್ತ್ರ ಪಡೆಗಳಿಗೆ ’ವೀರ್‌ ಬೈಕ್’ ಹೊರತಂದ ಉಡ್‌ಚಲೋ

ಸಶಸ್ತ್ರ ಪಡೆಗಳಿಗೆ ’ವೀರ್‌ ಬೈಕ್’ ಹೊರತಂದ ಉಡ್‌ಚಲೋ

ಸಶಸ್ತ್ರ ಪಡೆಗಳಿಗೆ ಗ್ರಾಹಕ ತಂತ್ರಜ್ಞಾನ ಉತ್ಪನ್ನಗಳನ್ನು ಪೂರೈಸುವ ಪುಣೆ ಮೂಲದ ಉಡ್‌ಚಲೋ ಸಂಸ್ಥೆಯು ಅಭಿವೃದ್ಧಿ ಪಡಿಸಿರುವ ಮೇಡ್‌ ಇನ್ ಇಂಡಿಯಾ ಎಲೆಕ್ಟ್ರಿಕ್ ಬೈಸಿಕಲ್ ’ವೀರ್‌ ಬೈಕ್’ ಇದೇ ಭೂಮಿ ದಿನಂದು (ಏಪ್ರಿಲ್ 22) ಬಿಡುಗಡೆಯಾಗಲಿದೆ.

ಸಶಸ್ತ್ರ ಪಡೆಗಳಿಂದ ಪ್ರೇರಣೆ ಪಡೆದು ಪರಿಸರ-ಸ್ನೇಹಿ ಹಾಗೂ ಕೈಗೆಟುಕುವ ಸಾರಿಗೆ ಅವಕಾಶವನ್ನು ಜನರಿಗೆ ಒದಗಿಸಲು ಉಡ್‌ಚಲೋ ಈ ಹೆಜ್ಜೆ ಇಟ್ಟಿದೆ. ಸಶಸ್ತ್ರ ಪಡೆಗಳಲ್ಲಿರುವ ಯೋಧರಿಂದ ಸ್ಪೂರ್ತಿ ಪಡೆದಿದ್ದಲ್ಲದೇ, ಇಂಗ್ಲಿಷ್‌ನಲ್ಲಿ VIR ಎಂದರೆ ಭೌತಶಾಸ್ತ್ರದ ಓಮ್ಸ್‌ ನಿಯಮವಾದ V = IRನ ಸೂಚಕವೂ ಆಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

25,995 ರೂ. ಬೆಲೆ ನಿಗದಿಯಾಗಿರುವ ಈ ಬೈಕ್‌ ಅನ್ನು ಸಶಸ್ತ್ರ ಪಡೆಗಳ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಖರೀದಿ ಮಾಡುವ ನಿರೀಕ್ಷೆ ಇದೆ.

ಈ ಬೈಸಿಕಲ್ ಎಂಥ ವಾತಾವರಣದಲ್ಲೂ ಕೆಲಸ ಮಾಡಬಲ್ಲದು ಎಂದು ವೀರ್‌ ಬೈಕ್‌ನ ಸಹ-ಸ್ಥಾಪಕ ಮತ್ತು ಆರ್‌&ಡಿ ಮುಖ್ಯಸ್ಥ ಸಹಿಲ್ ಉತ್ತೇಕರ್‌ ತಿಳಿಸಿದ್ದಾರೆ.

ಹಗುರವಾದ ಫ್ರೇಂ, ಎಲೆಕ್ಟ್ರಿಕ್ ಕಟ್-ಆಫ್ ಇರುವ ಡಿಸ್ಕ್ ಬ್ರೇಕ್, ಮತ್ತು ಅಡ್ಜಸ್ಟ್ ಮಾಡಬಹುದಾದ ಆಸನವನ್ನು ಹೊಂದಿರುವ ಈ ಬೈಕ್‌ನ ಎಲ್ಲಾ ಭಾಗಗಳನ್ನು ಭಾರತದಲ್ಲೇ ನಿರ್ಮಿಸಲಾಗಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ’ಮೇಕ್ ಇನ್ ಇಂಡಿಯಾ’ ಅಭಿಯಾನಕ್ಕೆ ಬೆಂಬಲ ಕೊಡುತ್ತದೆ ಎಂದಿದ್ದಾರೆ ಉತ್ತೇಕರ್‌.

For Latest News Updates, Join Our Whatsapp Community🚩
RELATED ARTICLES

Most Popular