HomeLatest Newsತನಗೆ ಚಿತ್ರದಲ್ಲಿ ಪಾತ್ರ ನೀಡದ ಚಿತ್ರತಂಡದ ವಿರುದ್ಧ ನಾನಾ ಪಾಟೇಕರ್ ಕೆಂಡ; ಹಿಂದಿನ ಸತ್ಯಾಂಶವೇನು?

ತನಗೆ ಚಿತ್ರದಲ್ಲಿ ಪಾತ್ರ ನೀಡದ ಚಿತ್ರತಂಡದ ವಿರುದ್ಧ ನಾನಾ ಪಾಟೇಕರ್ ಕೆಂಡ; ಹಿಂದಿನ ಸತ್ಯಾಂಶವೇನು?

ಬಾಲಿವುಡ್‌ನ ಅತ್ಯಂತ ಜನಪ್ರಿಯ ಮತ್ತು ಹಿಟ್ ಕಾಮಿಡಿ ಸರಣಿಯಾದ ‘ವೆಲ್ಕಮ್’ ಚಿತ್ರದ ಮೂರನೇ ಭಾಗ ‘ವೆಲ್ಕಮ್ ಟು ದಿ ಜಂಗಲ್’ ಸದ್ಯ ಭಾರಿ ಸೌಂಡ್ ಮಾಡುತ್ತಿದೆ. ಅಕ್ಷಯ್ ಕುಮಾರ್, ಸುನಿಲ್ ಶೆಟ್ಟಿ, ದಿಶಾ ಪಟಾನಿ, ಜಾಕ್ವೆಲಿನ್ ಫೆರ್ನಾಂಡಿಸ್, ಅರ್ಷದ್ ವಾರ್ಸಿ, ಜಾಕಿ ಶ್ರಾಫ್, ಪರೇಶ್ ರಾವಲ್ ಸೇರಿದಂತೆ ಬರೋಬ್ಬರಿ 25 ಕ್ಕೂ ಹೆಚ್ಚು ಸ್ಟಾರ್ ಕಲಾವಿದರು ನಟಿಸಿರುವ ಈ ಚಿತ್ರದ ಟ್ರೈಲರ್ ಮುಂಬೈನಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಆದರೆ, ಟ್ರೈಲರ್ ವೀಕ್ಷಿಸಿದ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ಸಿನಿಮಾದ ಐಕಾನಿಕ್ ಪಾತ್ರಗಳಾದ ಉದಯ್ ಶೆಟ್ಟಿ ಮತ್ತು ಮಜ್ನು ಭಾಯ್ ಕಾಣಿಸಿಕೊಳ್ಳದಿರುವುದು.

ಮೇಕರ್ಸ್ ವಿರುದ್ಧ ನಾನಾ ಪಟೇಕರ್ ಅಸಮಾಧಾನ?

ಚಿತ್ರದ ಟ್ರೈಲರ್ ಬಿಡುಗಡೆಯಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಸ್ಕ್ರೀನ್‌ಶಾಟ್ ಒಂದು ಸಖತ್ ವೈರಲ್ ಆಗುತ್ತಿದೆ. ವೆಲ್ಕಮ್ ಮೊದಲ ಎರಡು ಭಾಗಗಳಲ್ಲಿ ‘ಉದಯ್ ಶೆಟ್ಟಿ’ ಪಾತ್ರದ ಮೂಲಕ ಅಬ್ಬರಿಸಿದ್ದ ಹಿರಿಯ ನಟ ನಾನಾ ಪಟೇಕರ್, ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಚಿತ್ರತಂಡದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ವೈರಲ್ ಆಗಿರುವ ಸ್ಕ್ರೀನ್‌ಶಾಟ್‌ನಲ್ಲಿ, “25 ನಟರನ್ನು ಏನೋ ಕರೆದುಕೊಂಡು ಬಂದಿದ್ದೀರಿ, ಆದರೆ ಉದಯ್ ಶೆಟ್ಟಿ ಮತ್ತು ಮಜ್ನು ಭಾಯ್ ಅವರಂತಹ ಔರಾ (ಖದರ್) ಎಲ್ಲಿಂದ ತರುತ್ತೀರಿ?” ಎಂಬ ಸಾಲುಗಳಿವೆ. ಇದು ಚಿತ್ರರಂಗದಲ್ಲಿ ಮತ್ತು ನೆಟ್ಟಿಗರ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಏನಿದರ ಅಸಲಿ ಸತ್ಯ?

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ನಾನಾ ಪಟೇಕರ್ ಅವರ ಇನ್‌ಸ್ಟಾಗ್ರಾಮ್ ಸ್ಟೋರಿಯ ಸ್ಕ್ರೀನ್‌ಶಾಟ್ ಸಂಪೂರ್ಣವಾಗಿ ನಕಲಿಯಾಗಿದೆ. ಇದು ಎಡಿಟ್ ಮಾಡಲಾದ ಅಥವಾ ಎಐ (AI) ತಂತ್ರಜ್ಞಾನ ಬಳಸಿ ಸೃಷ್ಟಿಸಲಾದ ಪೋಸ್ಟ್ ಆಗಿದೆ. ನಾನಾ ಪಟೇಕರ್ ಅವರಾಗಲಿ ಅಥವಾ ಮಜ್ನು ಭಾಯ್ ಪಾತ್ರಧಾರಿ ಅನಿಲ್ ಕಪೂರ್ ಅವರಾಗಲಿ ‘ವೆಲ್ಕಮ್ ಟು ದಿ ಜಂಗಲ್’ ಚಿತ್ರತಂಡದ ವಿರುದ್ಧ ಯಾವುದೇ ರೀತಿಯ ನೆಗೆಟಿವ್ ಕಾಮೆಂಟ್ ಅಥವಾ ಅಸಮಾಧಾನ ವ್ಯಕ್ತಪಡಿಸಿಲ್ಲ ಎಂದು ಸ್ಪಷ್ಟವಾಗಿದೆ.

ಇನ್ನು ಇದೇ ವಿಷಯವಾಗಿ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ನಟ ಅಕ್ಷಯ್ ಕುಮಾರ್ ಅವರಿಗೆ ಪ್ರಶ್ನೆ ಎದುರಾದಾಗ, “ನಾವು ಖಂಡಿತವಾಗಿಯೂ ಅನಿಲ್ ಕಪೂರ್ ಮತ್ತು ನಾನಾ ಪಟೇಕರ್ ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಆದರೆ ಚಿತ್ರಕಥೆಗೆ ತಕ್ಕಂತೆ ಅವರ ಜಾಗದಲ್ಲಿ ಈ ಬಾರಿ ಅವರ ಇಬ್ಬರು ಸಹೋದರರಾಗಿ ಅರ್ಷದ್ ವಾರ್ಸಿ ಮತ್ತು ಸುನಿಲ್ ಶೆಟ್ಟಿ ಎಂಟ್ರಿ ಕೊಟ್ಟಿದ್ದಾರೆ” ಎಂದು ಉತ್ತರಿಸಿದ್ದಾರೆ. ಅಹಮದ್ ಖಾನ್ ನಿರ್ದೇಶನದ ಈ ಬಿಗ್ ಬಜೆಟ್ ಕಾಮಿಡಿ ಸಿನಿಮಾ ಜೂನ್ 26 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular