HomeAutoಕೆಟ್ಟು ನಿಂತ ಕಾರಿಗೆ ಕತ್ತೆ ಕಟ್ಟಿ ಶೋರೂಂಗೆ ಎಳೆದೊಯ್ದ ಮಾಲೀಕ

ಕೆಟ್ಟು ನಿಂತ ಕಾರಿಗೆ ಕತ್ತೆ ಕಟ್ಟಿ ಶೋರೂಂಗೆ ಎಳೆದೊಯ್ದ ಮಾಲೀಕ

ಖರೀದಿ ಮಾಡಿದ ಕೆಲವೇ ತಿಂಗಳಲ್ಲಿ ಕೈಕೊಟ್ಟ ಕಾರೊಂದನ್ನು ಕತ್ತೆಗೆ ಕಟ್ಟಿಕೊಂಡು ಶೋರೂಂಗೆ ಎಳೆದುಕೊಂಡು ಬಂದ ವ್ಯಕ್ತಿಯೊಬ್ಬನ ವಿಡಿಯೋ ವೈರಲ್ ಆಗಿದೆ.

“ಭಾರತೀಯರೊಂದಿಗೆ ಯಾವತ್ತೂ ಕಿರಿಕ್ ಮಾಡಿಕೊಳ್ಳಬೇಡಿ. 18 ಲಕ್ಷ ರೂ.ಗಳ ಕಾರೊಂದು ಕೆಟ್ಟಾಗ ಅದರ ಮಾಲೀಕ ಕಾರನ್ನು ಕತ್ತೆಗಳನ್ನು ಬಳಸಿಕೊಂಡು ಶೋರೂಂಗೆ ಕರೆದುಕೊಂಡು ಬಂದಿದ್ದಾರೆ. ಕೋಪಗೊಂಡ ಕಾರಿನ ಮಾಲೀಕ ಶೋರೂಂಗೆ ಕರೆ ಮಾಡಿದರೂ ಯಾವುದೇ ಪ್ರಯೋಜನ ಆಗದೇ ಇದ್ದರಿಂದ ಕತ್ತೆ ಬಳಸಿಕೊಂಡು ಕಾರನ್ನು ಎಳೆದು ತಂದಿದ್ದಾರೆ. ಈತ ಏಕೆ ಹೀಗೆ ಮಾಡಿದ್ದಾರೆ ಎಂದು ವೀಕ್ಷಿಸಿ,” ಎಂದು ಸಿರಜ್ ನೂರಾನಿ ಹೆಸರಿನ ನೆಟ್ಟಿಗರೊಬ್ಬರು ಟ್ವಿಟ್ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಉದಯ್ಪುರ ನಿವಾಸಿ ರಾಜ್ ಕುಮಾರ್‌‌ ಗಾಯಾರಿ ಮಂಗಳವಾರದಂದು ತಮ್ಮ ಕಾರನ್ನು ಕತ್ತೆಗೆ ಕಟ್ಟಿ, ತಮಟೆ ಶಬ್ದದ ನಡುವೆಯೇ ಎಳೆದೊಯ್ದಿದ್ದಾರೆ. ಕಾರಿನ ಬ್ಯಾಟರಿ ಕೆಟ್ಟ ಕಾರಣ ಅದನ್ನು ಶೋರೂಂಗೆ ಹೀಗೆ ಎಳೆದೊಯ್ಯಲಾಗಿದೆ ಎಂದು ತಿಳಿಸಲಾಗಿದೆ.

ಈ ಕೆಲಸ ಮಾಡಲು ಕ್ರೇನ್ ನೆರವು ಪಡೆಯುವ ಬದಲಿಗೆ ಪಾಪದ ಕತ್ತೆಗೆ ಈ ಉರಿ ಬಿಸಿಲಿನಲ್ಲಿ ಹೀಗೆ ಕೆಲಸ ಕೊಟ್ಟ ವಿಚಾರವನ್ನು ನೆಟ್ಟಿಗರು ತೀವ್ರವಾಗಿ ಟೀಕಿಸಿ ಕಾಮೆಂಟ್ ಮಾಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular