HomeLive Newsಪ್ರೊ ಕಬಡ್ಡಿ; ಇಂದು ಯು ಮುಂಬಾ - ಬೆಂಗಳೂರು ಬುಲ್ಸ್ ಮುಖಾಮುಖಿ

ಪ್ರೊ ಕಬಡ್ಡಿ; ಇಂದು ಯು ಮುಂಬಾ – ಬೆಂಗಳೂರು ಬುಲ್ಸ್ ಮುಖಾಮುಖಿ

ಪ್ರೊ ಕಬಡ್ಡಿ ಲೀಗ್  ಇನ್ನೇನು ಕೊನೆಯ ಘಟ್ಟ ತಲುಪಿದ್ದು, ಬೆಂಗಳೂರು ಬುಲ್ಸ್ ತಂಡ ಪ್ರತಿ ಪಂದ್ಯಗಳನ್ನು ಗೆಲ್ಲಲೇ ಬೇಕಾಗಿದೆ. ರೈಡರ್ಗಳ ಸರದಾರ  ಡುಮ್ಕಿ ಕಿಂಗ್ ಪರ್ದೀಪ್ ನರ್ವಾಲ್ ಅವರಿಂದ ಅಂದುಕೊಂಡಂತೆ ಪ್ರದರ್ಶನ ದೊರೆಯದೆ ಇರುವ ಕಾರಣ ದೊಡ್ಡ ಹೊಡೆತ ಕೊಟ್ಟಿದೆ. ಇಂದು ನೋಯಿಡಾ ಕ್ರೀಡಾಂಗಣದಲ್ಲಿ ಬೆಂಗಳೂರು ಬುಲ್ಸ್ ಬಲಿಷ್ಠ ಯು ಮುಂಬಾ  ತಂಡವನ್ನು ಎದುರಿಸಲಿದೆ.

ಯು ಮುಂಬಾ ತಂಡದಲ್ಲಿ ಯುವ ಆಟಗಾರ ಅಜಿತ್ ಚೌಹಾಣ್ ಈ ಬಾರಿ ತಮ್ಮ ವೇಗದ  ರೈಡಿಂಗ್ ಮೂಲಕ  ಎದುರಾಳಿಗಳ ನಡುಕ ಹುಟ್ಟಿಸುತ್ತಿದ್ದು,  ಗೂಳಿಗಳು ಇವರನ್ನು ಹಿಡಿಯಲು ಯಶಸ್ವಿಯಾಗಲಿದ್ದಾರಾ ಕಾದು ನೋಡಬೇಕಾಗಿದೆ. ಇದಕ್ಕೂ ಮುನ್ನ ಮೊದಲ ಪಂದ್ಯದಲ್ಲಿ  ಪುಣೇರಿ ಪಲ್ಟಾನ್ ಹಾಗೂ ಜೈಪುರ್ ಪಿಂಕ್ ಪ್ಯಾಂಥರ್ಸ್ ಮುಖಾಮುಖಿಯಾಗಲಿವೆ.

For Latest News Updates, Join Our Whatsapp Community🚩
RELATED ARTICLES

Most Popular