
ಮೃತರನ್ನು 18 ವರ್ಷದ ಫಯಾಜ್ ಅಹಮದ್, ಅಜುಂ ಖಾನ್ ಎಂದು ಗುರುತಿಸಲಾಗಿದೆ. ಇಬ್ಬರೂ ಸ್ನೇಹಿತರ ಜೊತೆ ಮೀನು ಹಿಡಿಯಲೆಂದು ನದಿಗೆ ಇಳಿದಿದ್ದರು. ಆದರೆ ನೀರಿನ ಸೆಳೆತಕ್ಕೆ ಸಿಲುಕಿ ಇಬ್ಬರು ಸಾವನ್ನಪ್ಪಿದ್ದಾರೆ.
ಸದ್ಯ, ಮೊಯಿನ್ ಶವ ಪತ್ತೆಯಾಗಿದ್ದು, ಅಜುಂ ಶವಕ್ಕಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಗಣೇಶ ಚತುರ್ಥಿ ಹಿನ್ನೆಲೆ ಇಂದು ಕಾಲೇಜಿಗೆ ರಜೆ ಇದ್ದರಿಂದ ಯುವಕರು ಮೀನು ಹಿಡಿಯಲು ಹೋಗಿದ್ದರು. ಆದರೆ ದುರದೃಷ್ಟಾವತ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

