HomeKarnatakaBIG NEWS: ಒಂದೇ ಹುದ್ದೆಗಾಗಿ ಇಬ್ಬರು ಅಧಿಕಾರಿಗಳ ಕಿತ್ತಾಟ; DHO ಕಚೇರಿಗೆ ಬೀಗ ಹಾಕಿ ತೆರಳಿದ...

BIG NEWS: ಒಂದೇ ಹುದ್ದೆಗಾಗಿ ಇಬ್ಬರು ಅಧಿಕಾರಿಗಳ ಕಿತ್ತಾಟ; DHO ಕಚೇರಿಗೆ ಬೀಗ ಹಾಕಿ ತೆರಳಿದ ಅಧಿಕಾರಿ…!

ಬೆಂಗಳೂರು: ಒಂದೇ ಹುದ್ದೆಗಾಗಿ ಇಬ್ಬರು ಅಧಿಕಾರಿಗಳ ನಡುವೆ ಕಿತ್ತಾಟ ನಡೆದಿದ್ದು, ಆರೋಗ್ಯಾಧಿಕಾರಿ ಕಚೇರಿಗೇ ಬೀಗ ಜಡಿದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ನಡೆದಿದೆ.

ಹಳೆ ಡಿ ಹೆಚ್ಒ ವಿಜಯೇಂದ್ರ ಹಾಗೂ ಹೊಸ ಡಿಹೆಚ್ಒ ಸುನೀಲ್ ಕುಮಾರ್ ನಡುವೆ ಹುದ್ದೆಗಾಗಿ ಕಿತ್ತಾಟ ನಡೆದಿದ್ದು, ಈ ಹಿನ್ನೆಲೆಯಲ್ಲಿ ದೇವನಹಳ್ಳಿ ತಾಲೂಕಿನ ಚಪ್ಪರಕಲ್ಲು ಬಳಿಯ ಡಿಹೆಚ್ಒ ಕಚೇರಿಗೆ ಬೀಗ ಹಾಕಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಳೆ ಆರೋಗ್ಯಾಧಿಕಾರಿ ವಿಜಯೇಂದ್ರ ವರ್ಗಾವಣೆ ಆದೆಶಕ್ಕೆ ತಡೆ ತಂದಿದ್ದಾರೆ. ಇದರಿಂದ ಹೊಸ ಆರೋಗ್ಯಾಧಿಕಾರಿಯಾಗಿ ನೇಮಕಗೊಂಡಿರುವ ಸುನೀಲ್ ಕುಮಾರ್ ಚಪ್ಪರಕಲ್ಲು ಬಳಿಯ ಡಿಹೆಚ್ಒ ಕಚೇರಿಗೆ ಬೀಗ ಹಾಕಿ ತೆರಳಿದ್ದಾರೆ ಎನ್ನಲಾಗಿದೆ.

 

For Latest News Updates, Join Our Whatsapp Community🚩
RELATED ARTICLES

Most Popular