ಎರಡು ಕುಟುಂಬಗಳ ನಡುವೆ ಮಾರಾಮಾರಿ; ಗಲಾಟೆಯಲ್ಲಿ ತಂದೆಯ ಕಿವಿ ಕಟ್; ಆಂಬುಲೆನ್ಸ್ ಚಾಲಕನಿಲ್ಲದೇ ತಾನೇ ಆಂಬುಲೆನ್ಸ್ ಓಡಿಸಿ ತಂದೆಯನ್ನು ಆಸ್ಪತ್ರೆಗೆ ದಾಖಲಿಸಿದ ಪುತ್ರ

ಬೆಳಗಾವಿ: ಕೌಟುಂಬಿಕ ಕಲಹ ಎರಡು ಕುಟುಂಬಗಳ ನಡುವೆ ಮಾರಾಮಾರಿಗೆ ಕಾರಣವಾದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಜನವಾಡ ಗ್ರಾಮದಲ್ಲಿ ನಡೆದಿದೆ.

ಎರಡು ಕುಟುಂಬಗಳ ಗಲಾಟೆ ವೇಳೆ ಜನವಾಡ ಗ್ರಾಮದ ಸಿದ್ದು ಪೂಜಾರಿ ಎಂಬಾತನಿಗೆ ಗಂಭೀರ ಗಾಯವಾಗಿದ್ದು, ಆತನ ಕಿವಿ ಕಟ್ ಆಗಿದೆ. ತಲೆ ಹಾಗೂ ಬೆನ್ನಿಗೆ ಗಂಭೀರವಾದ ಗಾಯಗಳಾಗಿವೆ. ಸಿದ್ದು ಪೂಜಾರಿಯ ಪತ್ನಿಯ ಕುಟುಂಬದವರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ತಕ್ಷಣ ಆತನನ್ನು ಸದಲಗಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ತಾಲೂಕು ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಸೂಚಿಸಿದ್ದಾರೆ. ತಾಲೂಕು ಆಸ್ಪತ್ರೆಗೆ ಕರೆದೊಯ್ಯಲು ಆಂಬುಲೆನ್ಸ್ ನೀಡುವಂತೆ ಕೇಳಿದರೆ ಆಸ್ಪತ್ರೆ ವೈದ್ಯರು ನಿರ್ಲಕ್ಷ್ಯ ತೋರಿದ್ದಾರೆ. ಚಾಲಕ ಇಲ್ಲ, ನೀವೇ ಆಂಬುಲೆನ್ಸ್ ತೆಗೆದುಕೊಂಡುಹೋಗಿ ಎಂದಿದ್ದಾರೆ. ಬೇರೆ ದಾರಿಯಿಲ್ಲದೇ ತಂದೆಯನ್ನು ಉಳಿಸಲು ಗಾಯಾಳು ಸಿದ್ದು ಪೂಜಾರಿ ಪುತ್ರ ಮಾಳು ಎಂಬುವವರೇ ಆಂಬುಲೆನ್ಸ್ ಚಾಲನೆ ಮಾಡಿಕೊಂಡು ಬಂದು ಸದಲಗಾದಿಂದ ಚಿಕ್ಕೋಡಿ ಆಸ್ಪತ್ರೆಗೆ ಸಿದ್ದು ಪೂಜಾರಿ ದಾಖಲಿಸಿದ್ದಾರೆ. ಚಿಕ್ಕೋಡಿಯಲ್ಲಿ ಚಿಕಿತ್ಸೆ ಪಡೆದ ಬಳಿಕ ಗಾಯಾಳು ಸಿದ್ದು ಪೂಜಾರಿಯನ್ನು ಜಿಲ್ಲಾಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

ಡಿಹೆಚ್ ಒ ಮಹೇಶ್ ಕೋಣೆ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read