HomeIndiaBIG NEWS: ಅಳುತ್ತಿದ್ದ ಮಗುವನ್ನು ಸುಮ್ಮನಿರಿಸಲು ಮದ್ಯ ಕುಡಿಸಿದ ತಂದೆ-ತಾತ; ಇಬ್ಬರು ಅರೆಸ್ಟ್

BIG NEWS: ಅಳುತ್ತಿದ್ದ ಮಗುವನ್ನು ಸುಮ್ಮನಿರಿಸಲು ಮದ್ಯ ಕುಡಿಸಿದ ತಂದೆ-ತಾತ; ಇಬ್ಬರು ಅರೆಸ್ಟ್

ಹೂಗ್ಲಿ: ಅಳುತ್ತಿದ್ದ ಕಂದಮ್ಮನನ್ನು ಸುಮ್ಮನಾಗಿಸಲು ತಂದೆ ಹಾಗೂ ಅಜ್ಜ ಇಬ್ಬರು ಸೇರಿ ಮದ್ಯವನ್ನು ಕುಡಿಸಿದ ಘಟನೆ ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ನಡೆದಿದೆ.

8 ತಿಂಗಳ ಮಗುವನ್ನು ಸುಮ್ಮನಿರಿಸಲು ಮಗುವಿನ ತಂದೆ ಹಾಗೂ ತಾತ ಮಗುವಿನ ಗಂಟಲಿಗೆ ಮದ್ಯ ಸುರಿದಿದ್ದಾರೆ. ಹೂಗ್ಲಿಯ ಪಾಂಡುವಾದ ಐಚ್ ಗಢ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅಳುತ್ತಿದ್ದ ಮಗುವನ್ನು ಸುಮ್ಮನಿರಿಸಲು ತಂದೆ-ತಾತ ಸೇರಿ ಮಗುವಿಗೆ ಮದ್ಯ ಕುಡಿಸಿದ್ದು, ಮಗು ಪ್ರಜ್ಞೆ ತಪ್ಪಿದೆ. ಬಳಿಕ ಮಗುವಿಗೆ ಪ್ರಜ್ಞೆ ಬಂದ ಬಳಿಕ ಮಗುವಿನ ತಾಯಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಧೀಶರು ಇಬ್ಬರು ಆರೋಪಿಗಳಿಗೆ 14 ದಿನಗಳ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ.

ಕುಡಿದು ಮನೆಗೆ ಬಂದ ಮಗುವಿನ ತಂದೆ ಪತ್ನಿ ಜೊತೆ ಜಗಳವಾಡಿ ಪತ್ನಿಯನ್ನು ಮನೆಯಿಂದ ಆಚೆ ಹಾಕಿ ಬಾಗಿಲು ಬಂದ್ ಮಾಡಿದ್ದಾನೆ. ಗಲಾಟೆಯಿಂದ ಮಲಗಿದ್ದ ಮಗು ಎದ್ದು ಅಳಲು ಆರಂಭಿಸಿದೆ. ಮಗು ಅಳುತ್ತಿದ್ದರೂ ತಾಯಿಗೆ ಬಾಗಿಲು ತೆಗೆದಿಲ್ಲ. ಮಗುವನ್ನು ಸುಮ್ಮನಾಗಿಸಲು ಹರಸಾಹಸ ಪಟ್ಟ ತಂದೆ-ಅಜ್ಜ ಇಬ್ಬರು ಮಗುವಿಗೆ ಮದ್ಯ ಕುಡಿಸಿದ್ದಾರೆ. ಗಲಾಟೆಯಿಂದ ಅಕ್ಕಪಕ್ಕದ ಮನೆಯವರು ಬಂದು ಮನೆ ಬಾಗಿಲು ಒಡೆದು ಮಗು ರಕ್ಷಿಸಿದ್ದಾರೆ. ಆದರೆ ಮದ್ಯ ಕುಡಿದ ಮಗು ಪ್ರಜ್ಞೆ ತಪ್ಪಿತ್ತು. ತಕ್ಷಣ ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮಗು ಚೇತರಿಸಿಕೊಳ್ಳುತ್ತಿದ್ದಂತೆ ಅಕ್ಕ-ಪಕ್ಕದ ಮನೆಯವರು ಹಾಗೂ ಮಗುವಿನ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನನ್ವಯ ಕುಡುಕ ತಂದೆ ಹಾಗೂ ಅಜ್ಜನನ್ನು ಪೊಲೀಸರು ಬಂಧಿಸಿದ್ದರು.

For Latest News Updates, Join Our Whatsapp Community🚩
RELATED ARTICLES

Most Popular