ಡಿಜಿಟಲ್ನ ಈ ಯುಗದಲ್ಲಿ ನಮ್ಮ ಒರಿಜಿನಲ್ ಮುಖವನ್ನು ಬೇಕಾದ ರೀತಿಯಲ್ಲಿ ತಿರುಚಿ, ತಿದ್ದಿ ತೀಡಿ ಪೋಸ್ಟ್ ಮಾಡಬಹುದು. ಸಾಮಾಜಿಕ ಜಾಲತಾಣದಲ್ಲಿ ಅದರಲ್ಲಿಯೂ ಹೆಚ್ಚಾಗಿ ಫೇಸ್ಬುಕ್ನಲ್ಲಿ ತಮ್ಮ ಫೋಟೋ ಹಾಕುವವರು ಅದನ್ನು ಎಡಿಟ್ ಮಾಡಿ ಸುಂದರಗೊಳಿಸಿ ಹಾಕುವುದು ಹೆಚ್ಚು. ಇದು ಈಗ ದೊಡ್ಡ ಕೆಲಸವೇನಲ್ಲ. ಇದಕ್ಕಾಗಿಯೇ ಹತ್ತಾರು ಆ್ಯಪ್ಗಳು ಕೂಡ ಕೆಲಸ ಮಾಡುತ್ತವೆ.
ಒಂದೇ ಒಂದು ಕ್ಲಿಕ್ನಲ್ಲಿ ನಮ್ಮ ಮುಖವನ್ನು ಹೇಗೆ ಬೇಕಾದರೂ ಬದಲಿಸಬಹುದು. ಆದರೆ ಚಿತ್ರರಂಗದಲ್ಲಿ? ಅದೂ ದಶಕಗಳ ಹಿಂದೆ ಹೀಗೆಯೇ ಮಾಡುವುದು ಸಾಧ್ಯವಿತ್ತೆ?
ಹೌದು ಎನ್ನುತ್ತದೆ ಈಗ ವೈರಲ್ ಆಗುತ್ತಿರುವ ಈ ಫೋಟೋಗಳು. ಚಿತ್ರಗಳನ್ನು ಎಡಿಟ್ ಮಾಡುವಷ್ಟು ಸುಲಭವಲ್ಲ ನಮ್ಮ ಮುಖವನ್ನು ನಿಜವಾಗಿಯೂ ಅದೇ ರೂಪದಲ್ಲಿ ಬಣ್ಣ ಹಚ್ಚುವುದು. ಆದರೆ ಕೆಲವು ನಟ – ನಟಿಯರು ತಮ್ಮ ಪಾತ್ರಕ್ಕೆ ತಕ್ಕಂತೆ ಗಂಟೆಗಟ್ಟಲೆ ಕೂತು ಮುಖಚಹರೆಯನ್ನು ಬದಲಿಸಿಕೊಂಡಿದ್ದಾರೆ. ಇವರ ಸಾಲಿನಲ್ಲಿ ಘಟಾನುಘಟಿ ನಟ-ನಟಿಯರು ಸೇರಿದ್ದಾರೆ. ಎಷ್ಟೋ ತಿಂಗಳು ಪ್ರತಿದಿನವೂ ತಮ್ಮ ಪಾತ್ರಕ್ಕೆ ತಕ್ಕಂತೆ ಮೇಕ್ ಓವರ್ ಮಾಡಿಕೊಳ್ಳಲು ಎಷ್ಟೋ ಗಂಟೆ ಶ್ರಮ ಪಟ್ಟವರೂ ಇದ್ದಾರೆ.
ಅಂಥವರಲ್ಲಿ ಒಬ್ಬರು ನಟ ಕಮಲ ಹಾಸನ್. ಅವರು ಬೇರೆಬೇರೆ ಚಿತ್ರಗಳಲ್ಲಿ ಭಿನ್ನಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಹಲವು ಚಿತ್ರಗಳಲ್ಲಿ ಇವರು ಕಮಲ್ ಹಾಸನ್ ಎಂದು ಗುರುತಿಸುವುದೇ ಕಷ್ಟ. ಆ ರೀತಿಯಲ್ಲಿ ಮೇಕಪ್ ಮಾಡಲಾಗಿದೆ. ಅವರ ಎಲ್ಲಾ ವೇಷಗಳನ್ನು ಒಂದೆಡೆ ಕಲೆ ಹಾಕಲಾಗಿದ್ದು, ಅದೀಗ ವೈರಲ್ ಆಗುತ್ತಿದೆ. ಇದೇ ರೀತಿಯ ಯಾವುದಾದರೂ ನಟರು ಇದ್ದರೆ ಹೇಳಿ ಎಂದು ತಿಳಿಸಲಾಗುತ್ತಿದ್ದು, ಕೆಲವರು ಕಂಗನಾ ರಣಾವತ್ ಫೋಟೋ ಶೇರ್ ಮಾಡಿದ್ದಾರೆ. ಜೊತೆಗೆ ಹಲವಾರು ಚಿತ್ರತಾರೆಯರ ಫೋಟೋಗಳು ಶೇರ್ ಆಗುತ್ತಿವೆ.
What are some of the craziest Indian movie transformations you’ve seen for roles?
I’ll start.. pic.twitter.com/ofpqbdc9FX
— ANMOL JAMWAL (@jammypants4) February 17, 2023
Amitabh Bachchan for Paa.
— Kameshwari (@Kameshwari93) February 17, 2023
This Post says it all, In Indian cinema #KanganaRanaut did massive transformation that no other actress could ever do. In Thalivii ( As Jayalalithaa ji ) & In Emergency ( As Indira Gandhi ji ) . MASSIVE TRANSFORMATION ALERT.. Not just transformation but a incredible acting ✨♾️ pic.twitter.com/4g6RhsQLB5
— Akansha (@AakanshaGill) February 18, 2023

