ಮದುವೆಯಾದ ವರ್ಷದಲ್ಲಿಯೇ ಪತಿ ಕಳೆದುಕೊಂಡ ಕಿರುತೆರೆ ನಟಿ ಶೃತಿ

ಚೆನ್ನೈ: ಇತ್ತಿಚಿನ ದಿನಗಳಲ್ಲಿ ಹೃದಯಾಘಾತಕ್ಕೆ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಲೆಕ್ಕವಿಲ್ಲದಷ್ಟು ಜನರು ಇಂತಹ ಆಕಸ್ಮಿಕ ಆಘಾತಕ್ಕೆ ಉಸಿರು ಚೆಲ್ಲುತ್ತಿದ್ದಾರೆ. ಇಂತಹ ವಿಧಿಯಾಟಕ್ಕೆ ಖ್ಯಾತ ಕಿರುತೆರೆ ನಟಿ ಶೃತಿ ಮದುವೆಯಾದ ವರ್ಷದಲ್ಲಿಯೇ ಪತಿ ಕಳೆದುಕೊಂಡಿರುವುದು ದುರಂತ.

ಫಿಟ್ನೆಸ್ ಮಾಡೆಲ್, ಜಿಮ್ ಟ್ರೇನರ್ ಅರವಿಂದ್ ಶೇಖರ್ ಹಾಗೂ ತಮಿಳು ಕಿರುತೆರೆ ನಟಿ ಶೃತಿ ಷಣ್ಮುಗ ಹಲವು ವರ್ಷಗಳ ಕಾಲ ಪ್ರೀತಿಸಿ, ಕಳೆದ ವರ್ಷ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ನವದಂಪತಿಯ ಬಾಳಲ್ಲಿ ಈಗ ಕತ್ತಲು ಕವಿದಿದೆ. ಶೃತಿ ಪತಿ ಅರವಿಂದ್ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಶೃತಿ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ.

ಅರವಿಂದ್ ಗೆ ಕೇವಲ 30 ವರ್ಷ. ಬಾಡಿ ಬಿಲ್ಡರ್ ಆಗಿದ್ದ ಅವರು, ದೇಹದ ತೂಕ ಇಳಿಸಿಕೊಳ್ಳಲು ಟ್ರೇನಿಂಗ್ ನೀಡುತ್ತಿದ್ದರು. 2022ರ ಮಿಸ್ಟರ್ ತಮಿಳುನಾಡು ಸ್ಪರ್ಧೆಯಲ್ಲಿ ಆಯ್ಕೆಯಾಗಿದ್ದರು. ಫಿಟ್ನೆಸ್ ಗೆ ಹೆಚ್ಚಿನ ಮಹತ್ವ ನೀಡುತ್ತಿದ್ದ ಅರವಿಂದ್ ಹೃದಯಾಘತಕ್ಕೀಡಾಗಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟರಲ್ಲೇ ಕೊನೆಯುಸಿರೆಳೆದಿದ್ದರು.

ಈಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಶೃತಿ ಷಣ್ಮುಗ ಬದುಕಲ್ಲಿ ಬಿರುಗಾಳಿ ಬೀಸಿದ್ದು, ಪತಿಯನ್ನು ಕಳೆದುಕೊಂಡು ಆಘಾತಕ್ಕೊಳಗಾಗಿದ್ದಾರೆ. ಅರವಿಂದ್ ಸಾವಿನ ಸುದ್ದಿ ತಿಳಿದು ತಮಿಳು ಕಿರುತೆರೆ ಲೋಕ, ಅಭಿಮಾನಿಗಳು ಶಾಕ್ ಆಗಿದ್ದು, ಶೃತಿ ಹಾಗೂ ಆಕೆಯ ಕುಟುಂಬ ಈ ಆಘಾತದಿಂದ ಬೇಗನೇ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read