HomeBeautyತ್ವಚೆಯ ಈ ಸಮಸ್ಯೆಗೆ ಅರಿಶಿನ ʼರಾಮಬಾಣʼ

ತ್ವಚೆಯ ಈ ಸಮಸ್ಯೆಗೆ ಅರಿಶಿನ ʼರಾಮಬಾಣʼ

ನಿಮ್ಮ ತ್ವಚೆಯ ಬಹುತೇಕ ಎಲ್ಲ ಸಮಸ್ಯೆಗಳಿಗೆ ಅತ್ಯುತ್ತಮ ಹಾಗೂ ಏಕೈಕ ಪರಿಹಾರವೆಂದರೆ ಅರಿಶಿನ. ಇದನ್ನು ನಿಯಮಿತವಾಗಿ ಬಳಸುವುದರಿಂದ ಮೊಡವೆ, ಕಲೆ, ಸುಕ್ಕುಗಟ್ಟುವಿಕೆ ಮೊದಲಾದ ಸಮಸ್ಯೆಗಳನ್ನು ತಡೆಯಬಹುದು.

ಅರಿಶಿನ ಕೊಂಬನ್ನು ತೇದು ಮುಖಕ್ಕೆ ಹಚ್ಚಿ ತಣ್ಣೀರಿನಿಂದ ತೊಳೆಯುವುದರಿಂದ ಮೊಡವೆ ಸಮಸ್ಯೆಯಿಂದ ದೂರವಿರಬಹುದು. ಆದರೆ ಅರಿಶಿನ ಮುಖಕ್ಕೆ ಹಚ್ಚಿದ ಬಳಿಕ ಬಿಸಿಲಿಗೆ ಹೋಗುವುದನ್ನು ತಪ್ಪಿಸಿ.

ಅರಿಶಿನದೊಂದಿಗೆ ನಾಲ್ಕು ಚಮಚ ಮೊಸರು ಬೆರೆಸಿ ಹಚ್ಚಿಕೊಳ್ಳುವುದರಿಂದ ತ್ವಚೆ ಒಣಗುವುದನ್ನು ತಪ್ಪಿಸಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅರಿಶಿನಕ್ಕೆ ಎರಡು ಚಮಚ ಲಿಂಬೆ ರಸ ಬೆರೆಸಿ ಹಚ್ಚಿಕೊಂಡರೆ ತ್ವಚೆ ಸ್ವಚ್ಛವಾಗುತ್ತದೆ.

ವಾರಕ್ಕೊಮ್ಮೆ ಕಡಲೆಹಿಟ್ಟಿಗೆ ತುಸು ಅರಿಶಿನ ಹಾಕಿ ಪೇಸ್ಟ್ ತಯಾರಿಸಿ ಹಚ್ಚಿಕೊಂಡರೆ ಮುಖ ಕಾಂತಿಯತವಾಗುತ್ತದೆ. ಇದು ಫೇಸ್ ಪ್ಯಾಕ್ ನಂತೆ ಕೆಲಸ ಮಾಡುತ್ತದೆ.

ಅರಿಶಿನಕ್ಕೆ ಜೇನು ಬೆರೆಸಿ ಹಚ್ಚಿಕೊಳ್ಳುವುದರಿಂದಲೂ ನಿಮ್ಮ ತ್ವಚೆ ಆಕರ್ಷಣೀಯವಾಗಿ ಕಾಣಿಸಿಕೊಳ್ಳುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular