HomeLatest NewsBREAKING NEWS: ತುಂಗಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಮೂವರು ನೀರುಪಾಲು

BREAKING NEWS: ತುಂಗಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಮೂವರು ನೀರುಪಾಲು

ಗದಗ: ಸ್ನೇಹಿತರೊಂದಿಗೆ ತುಂಗಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಮೂವರು ನೀರುಪಾಲಾಗಿರುವ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕೊರಲಹಳ್ಳಿಯಲ್ಲಿ ನಡೆದಿದೆ.

ಶರಣಪ್ಪ ಬಡಿಗೇರ (34) ಮಹೇಶ್ (36) ಗುರುನಾಥ್ (38) ನೀರುಪಾಲಾದವರು. ಗದಗ ಜಿಲ್ಲೆಯ ಶಿರಹಟ್ಟಿಯಿಂದ ಆಗಮಿಸಿದ್ದ ಐವರು ಸ್ನೇಹಿತರ ಗುಂಪು ಆಂಜನೇಯನ ದರ್ಶನ ಪಡೆದು ಬಳಿಕ ನದಿಗೆ ಈಜಲು ಹೋಗಿದ್ದರು. ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಸ್ನೇಹಿತರೊಂದಿಗೆ ಶರಣಪ್ಪ ದೇವಸ್ಥಾನಕ್ಕೆ ಬಂದಿದ್ದ.

ಈಜಲು ಬಾರದಿದ್ದರೂ ಸ್ನೇಹಿತ ಮಹೇಶ್ ನದಿಗೆ ಇಳಿದಿದ್ದ. ಆತ ನೀರುಪಾಲಾಗುತ್ತಿದ್ದಂತೆ ಶರಣಪ್ಪ ಹಾಗೂ ಗುರುನಾಥ್ ಆತನನ್ನು ರಕ್ಷಿಸಲು ನದಿಗೆ ಇಳಿದಿದ್ದಾರೆ. ಮೂವರು ನದಿ ನೀರು ಪಾಲಾಗಿದ್ದಾರೆ. ನದಿಯಲ್ಲಿ ನಾಪತ್ತೆಯಾಗಿರುವ ಮೂವರಿಗಾಗಿ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಶೋಧ ನಡೆಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿಜಯನಗರ ಜಿಲ್ಲೆ ಹೂವಿನಹಡಗಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ

For Latest News Updates, Join Our Whatsapp Community🚩
RELATED ARTICLES

Most Popular