ತುಮಕೂರು: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಗಲಾಟೆ ನಡೆದು ಓರ್ವ ಯುವಕ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕಸಾಪುರ ಮಾರಮ್ಮ ದೇವಸ್ಥಾನದ ಬಳಿ ನಡೆದಿದೆ.
17 ವರ್ಷದ ಸಿಂಹಾದ್ರಿ ಮೃತ ದುರ್ದೈವಿ. ಡಾನ್ಸ್ ವಿಚಾರವಾಗಿ ಎರಡು ಗುಂಪುಗಳ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಡಾನ್ಸ್ ವಿಚಾರವಗಿ ಕೊಲೆ ನಡೆದಿದೆ ಎಂದು ಯುವಕನ ಕುಟುಂಬದವರು ಆರೋಪಿಸಿದ್ದಾರೆ.
ನಾಯಕ ಸಮುದಾಯದ ಮಾರುತೇಶ್ (24) ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ. ನಾಯಕ, ಒಕ್ಕಲಿಗ ಸಮುದಾಯದಿಂದ ಗಣೇಶ ವಿಸರ್ಜನಾ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ನಾಯಕ ಸಮುದಾಯದವರು ಸಿಂಹಾದ್ರಿಗೆ ಕೀಳುಜಾತಿಯವನೆಂದು ನಿಂದಿಸಿದ್ದಾರೆ. ಬಳಿಕ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಮೃತ ಯುವಕನ ತಾಯಿ ನೀಡಿದ ದೂರುನ ಹಿನ್ನೆಲೆಯಲ್ಲಿ ಮಿಡಗೇಶಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆಸಿರುವ ಪೊಲಿಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.
ಪವಿತ್ರ ಸ್ನಾನಕ್ಕೆಂದು ಕೆರೆಗೆ ಇಳಿದಾಗ ದುರಂತ: ನೀರಿನಲ್ಲಿ ಮುಳುಗಿ 6 ಮಕ್ಕಳು ದಾರುಣ ಸಾವು
ಪಾಟ್ನಾ: ಧಾರ್ಮಿಕ ಕಾರ್ಯಕ್ರಮದ ನಿಮಿತ್ತ ಕೆರೆಯಲ್ಲಿ ಸ್ನಾನಕ್ಕೆ ತೆರಳಿದ್ದ ಆರು ಮಕ್ಕಳು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಬಿಹಾರದ ಭಾಗಲ್ಪುರ ಜಿಲ್ಲೆಯಲ್ಲಿ ನಡೆದಿದೆ.
ಕೆರೆಯಲ್ಲಿ ಸ್ನಾನ ಮಾಡುತ್ತಿದ್ದಾಗ ಆರು ಮಕ್ಕಳು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸುಲ್ತಂಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ತರೈತಾ ಬಹಿಯಾರ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ‘ಕರ್ಮ-ಧರ್ಮ’ ಹಬ್ಬದ ಅಂಗವಾಗಿ ಧಾರ್ಮಿಕ ಸ್ನಾನಕ್ಕಾಗಿ ಮಕ್ಕಳು ಕೆರೆಯಲ್ಲಿ ಸ್ನಾನಕ್ಕೆ ತೆರಳಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಮೂವರು ಬಾಲಕಿಯರು ಹಾಗೂ ಮೂವರು ಬಾಲಕರು ಸೇರಿ ಒಟ್ಟು ಆರು ಮಕ್ಕಳು ಸಾವನ್ನಪ್ಪಿದ್ದಾರೆ. ಮೃತಪಟ್ಟವರನ್ನು ಪೂಜಾ ಕುಮಾರಿ (13), ರಾಹುಲ್ ಕುಮಾರ್ (14), ವಿಕಾಸ್ ಕುಮಾರ್ (13), ಆಯುಷ್ ಕುಮಾರ್ (12), ಮೀನಾಕ್ಷಿ ಕುಮಾರಿ ಅಲಿಯಾಸ್ ಮಿಂಕಿ (12) ಮತ್ತು ಜ್ಯೋತಿ ಕುಮಾರಿ (14) ಎಂದು ಗುರುತಿಸಲಾಗಿದೆ
ಪೊಲೀಸರ ಪ್ರಕಾರ, ಮಕ್ಕಳ ಪೈಕಿ ಒಬ್ಬರು ಆಳವಾದ ನೀರಿಗೆ ಇಳಿದಾಗ, ಉಳಿದವರು ಆತನನ್ನು ರಕ್ಷಿಸಲು ತಾವೂ ನೀರಿಗೆ ಇಳಿದಿದ್ದಾರೆ. ಹೀಗೆ ಒಬ್ಬರನ್ನು ರಕ್ಷಿಸಲು ಹೋಗಿ ಒಬ್ಬರು ಅಂತಿಮವಾಗಿ ಆರು ಮಕ್ಕಳು ನೀರಿನಲ್ಲಿ ಮುಳುಗಿ ಮೃತಪಟ್ತಿದ್ದಾರೆ.
ಸ್ಥಳೀಯರು ಮಕ್ಕಳನ್ನು ಕೆರೆಯಿಂದ ಹೊರತೆಗೆದು ಸುಲ್ತಂಗಂಜ್ ರೆಫರಲ್ ಆಸ್ಪತ್ರೆಗೆ ಕರೆದೊಯ್ದರು, ಆದರೆ ಅಲ್ಲಿ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು ಎಂದು ಅಧಿಕಾರಿ ತಿಳಿಸಿದ್ದಾರೆ.
ಸುಲ್ತಂಗಂಜ್ ಸರ್ಕಲ್ ಅಧಿಕಾರಿ ರಾಮನ್ ಕುಮಾರ್ ಮತ್ತು ಠಾಣಾಧಿಕಾರಿ ಧನಂಜಯ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ. ನಿಯಮಗಳ ಪ್ರಕಾರ ಸಂತ್ರಸ್ತ ಕುಟುಂಬಗಳಿಗೆ ಸಾಧ್ಯವಿರುವ ಎಲ್ಲ ನೆರವು ಮತ್ತು ಪರಿಹಾರವನ್ನು ಒದಗಿಸಲಾಗುವುದು ಎಂದು ಠಾಣಾಧಿಕಾರಿ ಧನಂಜಯ್ ಕುಮಾರ್ ತಿಳಿಸಿದ್ದಾರೆ.

