HomeKarnatakaBIG NEWS: ನೀರು ಕೇಳುವ ನೆಪದಲ್ಲಿ ಮನೆ ಮಾಲೀಕನ ಮೇಲೆ ಗುಂಡಿನ ದಾಳಿ: ಇಬ್ಬರು ಆರೋಪಿಗಳು...

BIG NEWS: ನೀರು ಕೇಳುವ ನೆಪದಲ್ಲಿ ಮನೆ ಮಾಲೀಕನ ಮೇಲೆ ಗುಂಡಿನ ದಾಳಿ: ಇಬ್ಬರು ಆರೋಪಿಗಳು ಅರೆಸ್ಟ್

ತುಮಕೂರು: ಕುಡಿಯುವ ನೀರು ಕೇಳುವ ನೆಪದಲ್ಲಿ ಮನೆಗೆ ಬಂದು ಮಾಲೀಕನ ಮೇಲೆ ಗುಂಡಿನ ದಾಳಿ ನಡೆಸಿ ದರೋಡೆಗೆ ಯತ್ನಿಸಿದ್ದ ಇಬ್ಬರು ಆರೋಪಿಗಳನ್ನು ತುಮಕೂರು ಜಿಲ್ಲೆ ಕುಣಿಗಲ್ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಜಾರ್ಖಂಡ್ ಮೂಲದ ಏಜಾಸ್ ಮಿರ್ದಹ (30) ಹಾಗೂ ಸಹಿಬುಲ್ ಅನ್ಸಾರಿ (30) ಎಂದು ಗುರುತಿಸಲಾಗಿದೆ.

ಆರೋಪಿಗಳು ಮಾರ್ಚ್ 26ರಂದು ಕುಣಿಗಲ್ ಉರ್ಕೆಹಳ್ಳಿ ಗ್ರಾಮದ ಗಂಗಣ್ಣ ಎಂಬುವವರ ತೋಟದ ಮನೆಗೆ ಕುಡಿಯುವ ನೀರು ಕೇಳಿಕೊಂಡು ಬಂದಿದ್ದರು. ಬಳಿಕ ಮನೆಯಲ್ಲಿ ದರೋಡೆಗೆ ಯತ್ನಿಸಿದ್ದರು. ತಡೆಯಲು ಮುಂದಾದ ಮಾಲೀಕನ ಕಾಲಿಗೆ ಗುಂಡು ಹಾರಿಸಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಕರಣ ಸಂಬಂಧ ಕುಣಿಗಲ್ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಬಂಧಿತರಿಂದ ಒಂದು ಬೈಕ್, ಎರಡು ಪಿಸ್ತೂಲ್, ನಾಲ್ಕು ಸಜೀವ ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular