HomeLatest NewsBIG NEWS: ಸಿಗಂದೂರು ಬಳಿ ಪ್ರವಾಸಿಗರ ಟಿಟಿ ವಾಹನ ಪಲ್ಟಿ

BIG NEWS: ಸಿಗಂದೂರು ಬಳಿ ಪ್ರವಾಸಿಗರ ಟಿಟಿ ವಾಹನ ಪಲ್ಟಿ

ಶಿವಮೊಗ್ಗ: ಪ್ರವಾಸಿಗರ ಟಿಟಿ ವಾಹನ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಬಿದ್ದಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸಿಗಂದೂರು ಬಳಿಯ ಕೂರನಕೊಪ್ಪದ ಬಳಿ ನಡೆದಿದೆ.

ಬೆಂಗಳೂರಿನಿಂದ ಸಿಂಗದೂರು ಚೌಡೇಶ್ವರಿ ದೇವಸ್ಥಾನಕ್ಕೆಂದು ಪ್ರವಾಸಿಗರು ತೆರಳುತ್ತಿದ್ದರು. ಬೆಂಗಳೂರಿನಿಂದ 12 ಜನ ಮಹಿಳೆಯರು ಸಾಗರಕ್ಕೆ ಆಗಮಿಸಿ ಅಲ್ಲಿಂದ ಟಿಟಿ ವಾಹನದಲ್ಲಿ ಸಿಗಂದೂರಿಗೆ ತೆರಳುತ್ತಿದ್ದರು. ಕೂರನಕೊಪ್ಪ ಬಳಿ ಟಿಟಿ ವಾಹನ ಪಲ್ಟಿಯಾಗಿದೆ.

12 ಜನ ಮಹಿಳೆಯರು ಗಾಯಗೊಂಡಿದ್ದಾರೆ. ಅವರಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular