ಮಿಯಾಮಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟಿಎಸ್ಎ ಸಿಬ್ಬಂದಿಯೇ ಪ್ರಯಾಣಿಕರ ಬ್ಯಾಗ್ನಲ್ಲಿದ್ದ ಐಟೆಂಗಳನ್ನು ಕದಿಯುತ್ತಿರುವ ಆತಂಕಕಾರಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಫ್ಲೋರಿಡಾ ಆಟರ್ನಿ ಅಧಿಕಾರಿಗಳು ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.
ಜುಲೈ 29ನೇ ತಾರೀಖಿನ 20 ನಿಮಿಷಗಳ ವಿಡಿಯೋದಲ್ಲಿ ಟಿಎಸ್ಎ ಅಧಿಕಾರಿಗಳಾದ ವಿಲಿಯಮ್ಸ್ ಹಾಗೂ ಗೋಂಝಾಲ್ಸ್ ಎಂಬವರು ಪ್ರಯಾಣಿಕರ ಬ್ಯಾಗ್ನಿಂದ ಪರ್ಸ್ ತೆಗೆದುಕೊಂಡು ಬಳಿಕ ಬ್ಯಾಗ್ನ್ನು ಸಿಟಿ ಸ್ಕ್ಯಾನರ್ಗೆ ತಳ್ಳಿದ್ದಾರೆ. ಮತ್ತೊಂದು ಕ್ಲಿಪ್ನಲ್ಲಿ ಇಬ್ಬರು ಏಜೆಂಟ್ಗಳು ಸೆಕ್ಯೂರಿಟಿ ಟ್ರೇ ಮೇಲೆ ಕಣ್ಣಿಟ್ಟಿದ್ದಾರೆ. ಅಲ್ಲಿದ್ದ ವಸ್ತುಗಳನ್ನು ಜೇಬಿಗೆ ಎಗರಿಸಿದ್ದಾರೆ.
ಮೂವರು ಆರೋಪಿಗಳಾದ ಲ್ಯಾಬಾರಿಯಸ್ ವಿಲಿಯಮ್ಸ್, ಜೋಸ್ ಗಂಜಾಲೇಸ್ ಹಾಗೂ ಎಲಜಬೆತ್ ಫಸ್ಟರ್ ರನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಫಸ್ಟರ್ರನ್ನು ಪೊಲೀಸರು ಬಳಿಕ ರಿಲೀಸ್ ಮಾಡಿದ್ದಾರೆ ಎನ್ನಲಾಗಿದೆ.
ಮಿಯಾಮಿ ಏರ್ಪೋರ್ಟ್ನಲ್ಲಿ ನಡೆದ ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿದ ಪ್ರಯಾಣಿಕರೊಬ್ಬರು, ಸಿಸಿ ಟಿವಿ ಇದೆ ಎಂದು ಗೊತ್ತಿದ್ದರೂ ಸಹ ಈ ರೀತಿ ಕೃತ್ಯ ಎಸಗಲು ಅವರಿಗೆ ಧೈರ್ಯ ಎಷ್ಟಿರಬೇಡ ಎಂದು ಪ್ರಶ್ನೆ ಮಾಡಿದ್ದಾರೆ.
TSA Agents caught on surveillance video stealing hundreds of dollars in cash from passengers’ bags at Miami airport. pic.twitter.com/LhFW9yNRNV
— Mike Sington (@MikeSington) September 13, 2023

